ಬೆಳಗಾವಿ ತಾಲೂಕಿನ ಧಾಮಣೆ ಎಸ್ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ಸಹೋದರರಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ತಮ್ಮನ್ನು ಹೊಡೆದು ಕೊಂದ ಆರೋಪಿ ಅಣ್ಣನನ್ನು ಬಂಧಿಸಲಾಗಿದೆ.

ಬೆಳಗಾವಿ ತಾಲೂಕಿನ ಧಾಮಣೆ ಎಸ್ ಗ್ರಾಮದಲ್ಲಿ ಕೌಟುಂಬಿಕ ಕಲಹ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಅಣ್ಣ , ಮಾರುತಿ ಭರಮಾ ಬಾಳೇಕುಂದ್ರಿ (30) ತಮ್ಮ ಲಕ್ಷ್ಮಣ್ ಭರಮಾ ಬಾಳೇಕುಂದ್ರಿ(28)ಯನ್ನು ಹೊಡೆದಿದ್ದು, ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಬಂಧಿಸಿ ಬೆಳಗಾವಿ ಗ್ರಾಮೀಣ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.