ಜಾತಿ ಗಣತಿ ಪರ ವಿರೋಧ ಚರ್ಚೆ ವಿಚಾರ. ಸ್ವಾಭಾವಿಕ, ಯಾವುದೇ ವರದಿ ಬಂದಾಗ ನೂರಕ್ಕೆ ನೂರು ಒಪ್ಪಲ್ಲಾ. ನಾಳೆ ವಿಶೇಷ ಕ್ಯಾಬಿನೇಟ್ ಇದೆ. ತರಾತುರಿಯಲ್ಲಿ ಸರ್ಕಾರ ಮಾಡಲ್ಲಾ. ಸಾಧಕ ಬಾಧಕ ಚರ್ಚೆ ಮಾಡಿಯೇ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು. ಜಾತಿ ಗಣತಿ ಇದರ ಹಿಂದೆ ಯಾವುದೇ ರಾಜಕೀಯ ಲಾಭ ನಷ್ಟವಾಗಲ್ಲಾ. ಕೆಲವರು ಬಹಿರಂಗವಾಗಿ, ಕೆಲವರು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಸದನ ಕರೆದ್ರೆ ಒಳ್ಳೆಯದು. ಈ ಬಗ್ಗೆ ಬಹಿರಂಗ ಚರ್ಚೆಯಾಗೋದು ಒಳ್ಳೆಯದು ಎಂದರು.
ಮೋದಿ ಅವರು ರಾಜ್ಯ ಸರ್ಕಾರ ಕೆಡವಲು ಯತ್ನಿಸುತ್ತಾರೆ ಅನ್ನೋ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಮೊದಲ ದಿನದಿಂದ ನಾನು ಕೂಡಾ ಇದನ್ನೇ ಹೇಳಿದ್ದೇನೆ. ನಮ್ಮ ಸರ್ಕಾರ ಕೊನೆ ದಿನ ಇದೆ ಅಂದ್ರು ಪ್ರಯತ್ನ ಮಾಡ್ತಾರೆ. ನಾವು 14೦ ಇದ್ದೇವೆ, ಯಾವುದೇ ಆತಂಕ ವಿಲ್ಲವೆಂದರು. ವಕ್ಪ ಕಾಯ್ದೆ ಬಗ್ಗೆ ಸರ್ಕಾರ ನಿರ್ಧಾರ ಕ್ರಮ ಕೈಗೊಳ್ಳಬೇಕಿದೆ ಸದ್ಯಕಂತೂ ದಲಿತ ಸಮಾವೇಶ ಇಲ್ಲಾ. ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೇದೆ.
ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ಯಾಗಿಲ್ಲಾ. ನಾನು ಕೂಡಾ ಆ ಬಗ್ಗೆ ಯಾವುದೇ ಮನವಿ ಮಾಡಿಲ್ಲಾ ಎಂದರು.
ಇಡಿ ವಿರುದ್ಧ ಕಾಂಗ್ರೆಸ್ ನಿಂದ ಕಾನೂನು ಹೋರಾಟ ಮಾಡುತ್ತೆವೆ, ಪ್ರತಿಭಟನೆ ಮಾಡ್ತೇವೆ ಒಂದು ದಿನ, ಎರಡು ದಿನ ಮಾಡ್ತೇವೆ ಅಂತಿಮವಾಗಿ ಕೋರ್ಟ್ ಗೆ ಹೋಗ್ತೇವೆ. ಕೋರ್ಟ್ ಒಂದೇ ನಮಗೆ ಪರಿಹಾರ. ನಮಗೆ ಕಾನೂನು ಹೋರಾಟ ಒಂದೇ ಉಳಿದಿರೋದು ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಅವೆಲ್ಲ ನಮ್ಮ ಹತ್ತಿರ ಇಲ್ಲ, ನಾವೇನು ಮಾಡೋದಿಲ್ಲ. ಅಧ್ಯಕ್ಷರು, ಸಿಎಂ ಅವರನ್ನ ಕೇಳಿ, ಅವರು ಹೇಳ್ತಾರೆ.
ಇಂತಹ ನಿರ್ಧಾರ ಅವರೆ ಕೈಗೊಳ್ಳಬೇಕು ನಮ್ಮ ಹತ್ತಿರ ಇಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಮ್ಮ ವ್ಯಾಪ್ತಿಯಲ್ಲಿಲ್ಲ ಬದಲಾವಣೆಗೆ ನಮ್ಮ ಒತ್ತಡ ಏನು ಇಲ್ಲ. ಹೈಕಮಾಂಡ್ ಏನ್ ಮಾಡುತ್ತೆ ಅವರಿಗೆ ಬಿಟ್ಟ ವಿಚಾರ ನಾವು ಯಾವುದೇ ಮನವಿ ಮಾಡಿಲ್ಲ ಎಂದರು.
ಎಐಸಿಸಿ ಅಧ್ಯಕ್ಷರಿಂದ ಸಿಎಂ ಡಿಸಿಎಂ ಒಗ್ಗಟ್ಟಾಗಿರಬೇಕು ಎಂಬ ಸಂದೇಶ ವಿಚಾರ ಅದನ್ನ ಹೇಳುತ್ತಲೇ ಇರಬೇಕು ಅದು ಕುಸ್ತಿ ಇದ್ದ ಹಾಗೆ. ಜಾತಿಗಣತಿ ಬಂದಿದ್ಯಲ್ಲ ಇಂತಹದರಲ್ಲಿ ಎಲ್ಲರದು ಒಂದೇ ಅಭಿಪ್ರಾಯ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಒಟ್ಟಾಗಿರಿ ಒಟ್ಟಾಗಿ ಹೋಗಿ ಅಂತ ಹೇಳಬೇಕಾಗುತ್ತೆ ಅದು ಹೊಸದೇನಲ್ಲ ಎಂದರು.