ಕಾಗವಾಡ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಲ್ಲಿ ಜ್ಞಾನ ನೀಡಲಾಗುತ್ತದೆ. ಅವರ ಉನ್ನತಿಗಾಗಿ ಪಠ್ಯಪುಸ್ತಕದ ಜ್ಞಾನದೊಂದಿಗೆ ವ್ಯವಹಾರ ಜ್ಞಾನ ಹಾಗೂ ಧರ್ಮ ಸಂಸ್ಕಾರ ಜ್ಞಾನ ನೀಡುವುದು ಅಗತ್ಯವಿದೆ. ಎಂದು ಕೃಷ್ಣಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಚಿನ್ನಪ್ಪಾ ನಾದನಿ ಹೇಳಿದರು.

ಬುದುವಾರ ರಂದು ಶೇಡಬಾಳದ ಕೃಷ್ಣಾ ಶಿಕ್ಷಣ ಅಭಿವೃದ್ಧಿ ಸಮಿತಿ ಎಲ್ಲಿ ಬೇಸಿಗೆಯ ಐದು ದಿನಗಳ ಸಂಸ್ಕಾರ ಶಿಬಿರದೊಂದಿಗೆ ಕೊನೆ ದಿನ ಕಲಿಕುಂಡ ವಿಧಾನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಶ್ರಾವಕ ಶ್ರಾವಣಿಕೆಯರು ವಿದ್ಯಾರ್ಥಿಗಳಿಗೆ ಧರ್ಮ ಸಂಸ್ಕಾರದ ಬಗ್ಗೆ ವಿವರಿಸಿದರು.
ಆರ್ಚಕ ಬಾಹುಬಲಿ ಉಪಾಧ್ಯೆ ಶಿಬಿರ ಬಗ್ಗೆ ಮಾಹಿತಿ ನೀಡುವಾಗ ಕಳೆದ ಐದು ದಿನಗಳಿಂದ ಪ್ರತಿವರ್ಷದಂತೆ ಬೇಸಿಗೆ ಐದು ದಿನಗಳಲ್ಲಿ ಧರ್ಮ ಸಂಸ್ಕಾರ ಸಿವಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಜೈನ ಸಮಾಜದ ವಿಚಾರವಂತ ಡಾಕ್ಟರ ರಾಜೇಂದ್ರ ಸಾಂಗಾವೆ, ಶಿಕ್ಷಕರಾದ ಶ್ರೀಮತಿ ಕವಿತಾ ವಠಾರೆ, ರೂಪಾಲಿ ಪಾಟೀಲ, ಮಧ್ಯಪ್ರದೇಶ ರಾಜ್ಯದ ಪ್ಯಾರಿಸ್ ಬಯ್ಯ ಇವರು ಜೀವನದ ಮೌಲ್ಯ ಜೈನ ಧಾರ್ಮಿಕ ಸಂಸ್ಕಾರ ಮಾಹಿತಿ ನೀಡಿದರು.
ಕೃಷ್ಣಾ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಸುಜಾತಾ ಎಂದಗೌಡರ ಮಾತನಾಡಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅವರ ಜೀವನದಲ್ಲಿ ಒಳ್ಳೆಯ ಮನುಷ್ಯನಾಗಿ ಬಾಳಲು ಧರ್ಮ ಸಂಸ್ಕಾರ ಅತ್ಯವಶ್ಯಕತೆ ಇದೆ. ವಿದ್ಯಾರ್ಥಿ ಆಗಿರುವಾಗ ಇಂತಹ ಸಂಸ್ಕಾರದ ಅವಶಕ್ತೆ ಇದೆ, ಇದನ್ನು ಅರಿತು ಸಂಸ್ಕಾರ ನೀಡಲಾಗಿದ್ದು ಗ್ರಾಮದಲ್ಲಿ, ರಾಜ್ಯದಲ್ಲಿ, ದೇಶ ಹಾಗೂ ವಿಶ್ವದ ಶಾಂತಿಗಾಗಿ ಕಲಿಕುಂಡ ವಿಧಾನ ಹಮ್ಮಿಕೊಳ್ಳಲಾಗಿದೆ. ಎಂದು ಹೇಳಿದರು.
ಕಲಿಕುಂಡ ವಿಧಾನದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಅಶೋಕ ಪಾಟೀಲ, ಜಿನ್ನಾಪ್ಪಾ ನಾಮನಿ, ನಾಭಿರಾಜ ನಾಂದನಿ, ಸಚಿನ ಪಾಟೀಲ, ವಿಧಾನದ ಅರ್ಚಕರಾದ ಸನ್ಮತಿ ಉಪಾಧೆ, ಬಾಹುಬಲಿ ಉಪಾಧೆ, ವೃಷಭ ಉಪಾಧೆ, ಚಂದ್ರಕಾಂತ ಉಪಾಧೆ, ಪುಷ್ಪದಂತ ಉಪಾಧೆ, ಇವರು ಮಂತ್ರ ಪಠಣ ಮಾಡಿದರು. ಮಹಿಳಾ ಸದಸ್ಯರಾದ ಸುಜಾತಾ ಎಂದಗೌಡರ, ಜಯಶ್ರೀ ನಂದನಿ, ಜ್ಯೋತಿ ಪಾಟೀಲ, ಸುರೇಖಾ ಮಾಲಗಾವೆ, ಶೋಭಾ ನಾಂದ್ರೆ, ವಂದನಾ ಪಾಟೀಲ, ಚೇತನ ಅಂದ್ರೆ, ಭರತೇಶ ನಾಂದ್ರೆ, ಅವಿನಾಶ ಪಾಟೀಲ ಸೇರದಂತೆ ಅನೇಕರು ಇದ್ದರು.
ಸುಕುಮಾರ ಬನ್ನೂರೆ
ಇನ ನ್ಯೂಸ ಕಾಗವಾಡ