ಅಥಣಿ: ಜನರು ಬೆಳಿಗ್ಗೆ ಎದ್ದು ಟೀ ಕುಡಿಯೋ ಮುಂಚೆಯೇ ಇಲ್ಲಿ ಬಾರ್ ಗಳು ರಾಜಾರೋಷವಾಗಿ ಓಪನ್ ಆಗ್ತಿವೆ! ಆದ್ರೂ ಕೂಡ ಅಬಕಾರಿ ಇಲಾಖೆ ಮಾತ್ರ ಜಾಣ ಕುರುಡರಂತಿರೋದು ಹಲವು ಅನುಮಾನಗಳನ್ನು ಹುಟ್ಟಿಸಿದೆ.

ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದ ಅನುಶ್ರೀ ಪೆಗ್ ಬಾರ್ ಮಾಲೀಕ ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲೇ ತನ್ನ ಅಂಗಡಿ ಓಪನ್ ಮಾಡಿದ್ದು ತೀವ್ರ ವಿರೋಧಕ್ಕೆ ಕಾರಣವಾಗಿದೆ.
ತಾಲೂಕಿನ ಹಲವು ಮದ್ಯದಂಗಡಿಗಳು ಶಾಲಾ- ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ದಾರಿ ಮಧ್ಯೆ ಇದ್ರೂ ಬೆಳಿಗ್ಗೆಯೇ ಬಾರ್ ಓಪನ್ ಮಾಡಿ ಕಾನೂನುಬಾಹಿರ, ಸಮಾಜವಿರೋಧಿ ಧೋರಣೆ ತೋರುತ್ತಿರುವ ಮದ್ಯದಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.