Bagalkot

ಅರಮನೆಯಂತಹ ಮಠ ಕಟ್ಟುವ ಉದ್ದೇಶ ನನಗಿಲ್ಲ…

Share

ರಾಜ್ಯ ಮಟ್ಟದ ಪಂಚಮಸಾಲಿ ಸಮಾಜದ ಸಭೆಯನ್ನು ಏಪ್ರೀಲ್ ೨೦ ರಂದು ನಡೆಸಿ ಎಲ್ಲ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದೆಂದು ಕೂಡಲಸಂಗಮ ಗುರುಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜೀ ಹೇಳಿದರು.

ಅವರು ಇಂದು ಬಾಗಲಕೋಟೆಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದರು. ಮೀಸಲಾತಿ ಹೋರಾಟವನ್ನ ಮತ್ತೆ ಯಾವ ಅಂಶಗಳನ್ನ ಇಟ್ಟುಕೊಂಡು ಮುನ್ನೆಡೆಯಬೇಕು ಎಂಬ ಸಭೆ ಕರೆಯಲಾಗಿದೆ.ಗೊಂದಲಗಳಾದ್ರೂ, ಸಮಾಜದ ಋಣ ತೀರಿಸುವ ಕೆಲಸ ಮಾಡ್ತೇನೆ.ಸಮಾಜದ ಕಟ್ಟಕಡೆಯ ವ್ಯಕ್ತಿಯ ನಿರ್ಧಾರದಂತೆ ನಡೆಯುತ್ತೇನೆ. ಅಜ್ಞಾನಕ್ಕೆ ಒಳಪಟ್ಟಂತಹ ಹೇಳಿಕೆಗಳಿಗೆ ಸ್ಪಂದಿಸಲ್ಲ.ಯಾರು ಎಷ್ಟು ದೊಡ್ಡವರಾಗಿದ್ದಾರೋ, ಅವ್ರ ಮನಸ್ಸಿಗೆ ಪ್ರಶ್ನೆ ಮಾಡಿಕೊಂಡರೆ ಸಾಕು. ಇವೆಲ್ಲವನ್ನ ಸಹಿಸಿಕೊಂಡು ನಾನು ಬೀದಿಗೆ ಬಂದು ಪಾದಯಾತ್ರೆ ಮಾಡಿದೆ. ಅರಮನೆಯಂತಹ ಮಠ ಕಟ್ಟುವ ಉದ್ದೇಶ ನನಗಿಲ್ಲ. ಭಕ್ತರು ಕೊಡುವ ಕೈತುತ್ತು ನನಗೆ ಮಹಾ ಪ್ರಸಾದ ಎಂದರು.

ಇನ್ನು ಏಪ್ರಿಲ್ ೨೦ರ ಸಭೆಗೆ ಟ್ರಸ್ಟ್ ಪದಾದಿಕಾರಿಗಳು, ಮುಖಂಡರು, ವಕೀಲರ ಸಂಘಟನೆ, ಭಕ್ತ ಗಣ ಮಾಜಿ ಹಾಲಿ ಶಾಸಕ ಸಚಿವರಿಗೆ ಸಭೆಗೆ ಬರಲು ವಿನಂತಿಸಲಾಗಿದೆ. ಭಿನ್ನಾಭಿಪ್ರಾಯ ಬೇಡ. ಸಣ್ಣ ಪುಟ್ಟ ಜಗಳಗಳನ್ನ ಮನೆಯಲ್ಲೇ ಕುಳಿತು ಬಗೆಹರಿಸಿಕೊಳ್ಳೋಣ ಎಂದರು. ಬೈಟ್

Tags:

error: Content is protected !!