ಮಲಪ್ರಭಾ ನದಿಯಲ್ಲಿ ಮುಳುಗಿ ಯೋಧ ಸಹಿತ ಇಬ್ಬರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಮಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ

ಯುವಕನ ರಕ್ಷಣೆ ಮಾಡಲು ಹೋಗಿ ಯುವಕನ ಜೊತೆ ಯೋಧನೂ ಸಹ ಸಾವಿಗೀಡಾಗಿದ್ದಾನೆ.
ಹಂಸನೂರು ಗ್ರಾಮದ ಶೇಖಪ್ಪ ಹಾಗೂ ಗದಗ ಜಿಲ್ಲೆಯ ಬೇನಾಳ ಗ್ರಾಮದ ಯೋಧ ಮಹಾಂತೇಶ ಮೃತ ದುರ್ದೈವಿಗಳಾಗಿದ್ದಾರೆ
ಸ್ನಾನ ಮಾಡಲೆಂದು ಮೊದಲು ಶೇಖಪ್ಪ ನದಿಗೆ ಇಳಿದಿದ್ದಾನೆ.
ಈಜು ಬಾರದೇ ಮುಳುಗುತ್ತಿದ್ದಾಗ ರಕ್ಷಣೆಗೆ ಧಾವಿಸಿದ ಯೋಧ ಮಹಾಂತೇಶನ ಕೊರಳು ಹಿಡಿದು ಶೇಖಪ್ಪ ಒದ್ದಾಡಿದ್ದಾನೆ. ಇದರಿಂದಾಗಿ
ನದಿಯ ದಡ ಸೇರಲಾರದೇ ಶೇಖಪ್ಪ ಮತ್ತು ಮಹಾಂತೇಶ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ
ಅಗ್ನಿಶಾಮಕ ದಳದವರು
ಶವಗಳನ್ನು ನದಿಯಿಂದ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಬಾದಾಮಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.