ಖಾನಾಪೂರ ತಾಲೂಕಿನ ಕೊನೆಯ ಗ್ರಾಮವಾದ ಜಾಮಗಾಂವ ಗ್ರಾಮದಲ್ಲಿ ವಾರ್ಷಿಕ ಸತ್ಯ ನಾರಾಯಣ ಪೂಜೆ ನೇರವೇರಿತು ಈ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡು ಸತ್ಕಾರ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕ ಅರ್ಬನ್ ಬ್ಯಾಂಕ್ ಅಧ್ಯಕ್ಷ ಅಮೃತ ಶೇಲಾರ್ ಅವರು ಸತ್ಯ ನಾರಾಯಣ ಪೂಜೆಯಿಂದ ಮನಸಿಗೆ ಶಾಂತಿ ನೆಮ್ಮದಿ ದೊರೆತು ಸಮಾಜದಲ್ಲಿ ಒಳ್ಳೆಯ ಸಂಸ್ಕಾರಯುತ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿಯಾಗಲಿದೆ, ಧಾರ್ಮಿಕ ಚಟುವಟಿಕೆಗಳು ಯುವ ಪೀಳಿಗೆಗೆ ಧಾರ್ಮಿಕತೆಯ ಸಂದೇಶಗಳನ್ನು ನೀಡುತ್ತದೆ ಎಂದರು

ಈ ಸಂದರ್ಭದಲ್ಲಿ ಕಾಡಂಚಿನಲ್ಲಿ ಇರುವ ಕೊನೆಯ ಗ್ರಾಮವಾದ ಜಾಮಗಾಂವ ಗ್ರಾಮದಲ್ಲಿ ನಡೆದ ವಾರ್ಷಿಕ ಸತ್ಯ ನಾರಾಯಣ ಪೂಜೆಯಲ್ಲಿ ಬಹುಸಂಖ್ಯೆಯಲ್ಲಿ ಗ್ರಾಮಸ್ಥರು, ವಿವಿಧ ಗ್ರಾಮಗಳಿಂದ ಬಂದಂತಹ ಭಕ್ತರು ಉಪಸ್ಥಿತರಿದ್ದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ