ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸ್ವಜಾತಿ ಮುಖಂಡರೇ ಅಕ್ರಮಣಕಾರಿ ಬ್ಯಾಟಿಂಗ್ ಮಾಡೋ ಮೂಲಕ ಬಿಜೆಪಿ ಪರವಾಗಿ ರಕ್ಷಣಾತ್ಮಕ ಆಟ ನಡೆಯತೊಡಗಿದೆ. ಉತ್ತರ ಕರ್ನಾಟಕದ ಮುಖಂಡರು ಪ್ರತಿದಿನ ಒಬ್ಬೊಬ್ಬರಾಗಿ ಸುದ್ದಿಗೋಷ್ಡಿ ನಡೆಸುವ ಮೂಲಕ ಇಡೀ ಸಮಾಜ ಯತ್ನಾಳರ ಹಿಂದೆ ಇಲ್ಲಾ ಎನ್ನೋ ಸಂದೇಶ ನೀಡಲು ಪೈಪೋಟಿ ನಡೆಸುತ್ತಿದ್ದಾರೆ. ಒಂದು ಕಡೆ ವಿಡಿಯೋ ರೀಲೀಜ್, ಇನ್ನೊಂದೆಡೆ ಇನ್ನೆರಡು ದೊಡ್ಡ ವಿಡಿಯೋ ಗಳು ಬಿಡುಗಡೆಯ ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ ಯತ್ನಾಳರಿಂದ ತಮಗಾದ ಅನ್ಯಾಯ ದ ಕುರಿತು ವಿವರಿಸುತ್ತಿದ್ದಾರೆ. 3 ಪಾಯಿಂಟ್ ಅಜೆಂಡಾ ಮುನ್ನಲೆಗೆ ಬಂದಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಬಿಜೆಪಿ ಪಕ್ಷದಿಂದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಬಳಿಕ ಬಿಜೆಪಿ ಪಕ್ಷಕ್ಕೆ ಆಗಬಹುದಾದ ಡ್ಯಾಮೇಜ್ ಮ್ಯಾನೇಜ್ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಶಾಸಕ ಯತ್ನಾಳರಿಗೆ ಕಂಡು ಬಂದಿರುವ ಬೆಂಬಲವನ್ನು ಕಡಿಮೆ ಮಾಡಲು 3 ಪಾಯಿಂಟ್ ಅಜೆಂಡಾ ಕಾರ್ಯಗತಗೊಳಿಸಲಾಗುತ್ತಿದೆ ಎನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಶಾಸಕ ಯತ್ನಾಳರ ವಿರುದ್ಧ ಸ್ವಕ್ಷೇತ್ರದಲ್ಲಿ ಹಾಗೂ ಉತ್ತರ ಕರ್ನಾಟಕ ಪಂಚಮಸಾಲಿ ಸಮಾಜದ ಮುಖಂಡರು ಸುದ್ದಿಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಇತ್ತ ಮಾಜಿ ಶಾಸಕರು,ಮಾಜಿ ಸಚಿವರು ಕೂಡಾ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಯತ್ನಾಳರಿಗೆ ಯುವಶಕ್ತಿಯ ಬೆಂಬಲವಿರೊದ್ರಿಂದ ಅಜೆಂಡಾ ಪಾಯಿಂಟ್ 1 ರಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಹಿಂದಿನ ರೂಪುರೇಷೆ ಹೇಗಿತ್ತು. ಶಾಸಕ ಯತ್ನಾಳ ಎಂಟ್ರಿ ಬಳಿಕ ಯತ್ನಾಳ ಹೋರಾಟದ ನೇತೃತ್ವದಲ್ಲಿ ಯಾವ ರೀತಿ ಮೀಸ್ ಲೀಡ್ ಮಾಡಿದ್ದರು ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪಂಚಮಸಾಲಿ ವಿರೋಧಿಯಲ್ಲಾ ಎಂಬ ಸ್ಪಷ್ಟನೆ ಕೊಡುವದು ಒಂದಾಗಿದೆ. ಇನ್ಎ ಯತ್ನಾಳ್ ಹಳೇ ವಿಡಿಯೋ ರಿಲೀಸ್ ಮಾಡಿ, ಸಖತ್ ತಿರುಗೇಟು ಕೊಡಲಾಗುತ್ತಿದೆ. ಯಡಿಯೂರಪ್ಪ ವಿರುದ್ದ ತಿರುಗಿ ಬಿದ್ದಿರುವ ಶಾಸಕ ಯತ್ನಾಳ್ ಯಡಿಯೂರಪ್ಪ ಮನೆಗೆ ಹೋಗಿದ್ದ ವಿಡಿಯೋ ಪ್ರದರ್ಶನ ಮಾಡಿ ಯತ್ನಾಳ್‌ಗೆ ತಿರುಗೇಟು ಕೊಟ್ಟರು. ಯತ್ನಾಳ್ ಯಡಿಯೂರಪ್ಪ ಮನೆಗೆ ಹೋಗಿದ್ದ ಹಳೆಯ ವಿಡಿಯೋ ಪ್ರದರ್ಶನ ಮಾಡಿದರು, ಯಡಿಯೂರಪ್ಪ ವಾಪಸ್ ಬಿಜಾಪುರಕ್ಕೆ ಕರೆತಂದು ನನ್ನ ಟಿಕೆಟ್ ಕೊಟ್ಟಿದ್ದಾರೆ ಎಂದು ಯತ್ನಾಳ್ ಹೇಳುವ ವಿಡಿಯೋ ಬೈಟ್ ಪ್ಲೇ ಮಾಡಲಾಗುತ್ತಿದೆ.
ಇನ್ನೂ ಅಜೆಂಡಾ ಪಾಯಿಂಟ್ 2 ರಲ್ಲಿ ಶಾಸಕ ಯತ್ನಾಳ ಪಂಚಮಸಾಲಿ ನಾಯಕ ಎಂದು ಬಿಂಬಿತವಾಗುತ್ತಿದ್ದು ಇದನ್ನು ತಡೆಯಲು ಈ ಹಿಂದೆ ಶಾಸಕ ಯತ್ನಾಳ ಉತ್ತರ ಕರ್ನಾಟಕ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಪಂಚಮಸಾಲಿ ನಾಯಕರನ್ನು ರಾಜಕೀಯವಾಗಿ ಬೆಳೆಯದಂತೆ ಯಾವಾವ ರೀತಿಯಲ್ಲಿ ತುಳಿದರು. ವಿರೋಧ ಪಕ್ಷದವರ ಜೊತೆಗೆ ಯಾವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡರು. ಪಂಚಮಸಾಲಿ ಮುಖಂಡರಿಗೆ ಮಗ್ಗುಲ ಮುಳ್ಳಾದರೂ ಎನ್ನೋ ಕುರಿತು ಬಹಿರಂಗ ಪಡಿಸುವದಾಗಿದೆ. ಅಷ್ಟು ಅಭಿಮಾನ ಇದ್ದರೆ ಪಂಚಮಸಾಲಿ ಸಮಾಜದ ಮುಖಂಡರಿಗೆ ಮಣೆ ಹಾಕಬೇಕಿತ್ತು. ಜಾತಿ ಪ್ರೇಮವೂ ಇಲ್ಲಾ ಹಿಂದುತ್ವವೂ ಇಲ್ಲಾ ಇವರೊಬ್ಬ ಅವಕಾಶವಾದಿ ಎನ್ನೋದನ್ನು ಸಾಬೀತುಪಡಿಸಲು ಜೆಡಿಎಸ್ ನಲ್ಲಿಯ ಪೊಟೊಗಳನ್ನು ವೈರಲ್ ಮಾಡುವದಾಗಿದೆ. ಇನ್ನೂ 3 ಅಜೆಂಡಾ ಪಾಯಿಂಟ್ ನಲ್ಲಿ ಕುಟುಂಬ ರಾಜಕಾರಣ ವಿರುದ್ಧ ಸಮರ ಸಾರಿರುವ ಶಾಸಕ ಯತ್ನಾಳ ವಿರುದ್ಧ ಯತ್ನಾಳ ಜೊತೆಯಲ್ಲಿ ಇರುವ ಟೀಮ್ ಸದಸ್ಯರ ಕುಟುಂಬ ರಾಜಕಾರಣದ ಕುರಿತು ಬಹಿರಂಗ ಪಡಿಸುವದು ಸೇರಿದಂತೆ ಶಾಸಕ ಯತ್ನಾಳರ ಪುತ್ರ ರಾಮನಗೌಡ ಪಾಟೀಲ ರನ್ನು ತಮ್ಮ ಮುಂದಿನ ಉತ್ತರಾಧಿಕಾರಿ ಎಂಬಂತೆ ಬಿಂಬಿಸಲು ಯಾವೆಲ್ಲಾ ತಯಾರಿ ಮಾಡಿದ್ದಾರೆ. ಅದ್ಯಾವ ಪೂರ್ವ ತಯಾರಿಗಳು ನಡೆಯುತ್ತಿವೆ ಎನ್ನೋದನ್ನು ಸಾರ್ವಜನಿಕವಾಗಿ ಬಿಚ್ಚಿಡುವದಾಗಿದೆ.
ಒಟ್ನಲ್ಲಿ ಬಿಜೆಪಿ ಪಕ್ಷಕ್ಕೆ ಆಗಬಹುದಾದ ಇಮೇಜ್ ಡ್ಯಾಮೇಜ್ ಮ್ಯಾನೇಜ್ ಮಾಡಲು ಬಿಜೆಪಿ ಮುಂದಾಗಿದೆ. ಇತ್ತ ಫೈರ್ ಬ್ರ್ಯಾಂಡ್ ಶಾಸಕ ಯತ್ನಾಳರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗತೊಡಗಿದೆ. ಈ ಬೆಳವಣಿಗೆಗಳು ಅದ್ಯಾವ ಹಂತಕ್ಕೆ ತಲುಪುತ್ತದೆ ಅನ್ನೋದನ್ನು ಕಾದುನೋಡಬೇಕಿದೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.