ಬೆಳಗಾವಿ ಮಹಾನಗರದಲ್ಲಿ ಜೈನ್ ಸಮಾಜಬಾಂಧವರಿಂದ ಶ್ರೀ ಭಗವಾನ್ ಮಹಾವೀರರ 2624 ನೇ ಜನ್ಮ ಕಲ್ಯಾಣಕ ಮಹೋತ್ಸವವನ್ನು ಅದ್ಧೂರಿಯಾಗಿ ಅಚರಿಸಲಾಯಿತು. ನಗರದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಗಣ್ಯರು ಭಗವಾನ ಮಹಾವೀರರು ಜಗತ್ತಿಗೆ ನೀಡಿದ ಶಾಂತಿ ಅಹಿಂಸೆಯ ಸಿದ್ಧಾಂತಗಳನ್ನು ಮೈಗುಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಇನ್ನು ನಗರದಲ್ಲಿ ನಡೆದ ಭವ್ಯ ಶೋಭಾಯಾತ್ರೆಯೂ ಎಲ್ಲರನ್ನು ಆಕರ್ಷಿಸಿತು

ಬೆಳಗಾವಿಯ ಟಿಳಕಚೌಕಿನಲ್ಲಿ ಶ್ರೀ ಭಗವಾನ್ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಮಧ್ಯವರ್ತಿ ಉತ್ಸವ ಸಮಿತಿಯ ವತಿಯಿಂದ ಶ್ರೀ ಭಗವಾನ್ ಮಹಾವೀರರ ಜನ್ಮಕಲ್ಯಾಣಕ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಹಾಪೌರರಾದ ಮಂಗೇಶ್ ಪವಾರ್, ಉಪಮಹಾಪೌರರಾದ ವಾಣಿ ಜೋಷಿ, ದಕ್ಷಿಣ ಶಾಸಕರಾದ ಅಭಯ್ ಪಾಟೀಲ್, ನಗರಸೇವಕ ಜಯತೀರ್ಥ ಸವದತ್ತಿ, ಮಾಜಿ ಶಾಸಕ ಸಂಜಯ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ರಾಜೇಂದ್ರ ದೊಡ್ಡಣ್ಣವರ, ಎಂ.ಬಿ. ಜೀರಲಿ, ಸುನೀಲ್ ಹನುಮಣ್ಣವರ, ರಾಜೇಂದ್ರ ಜೈನ್ ಸೇರಿದಂತೆ ಇನ್ನುಳಿದ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆಯನ್ನು ನೀಡಲಾಯಿತು.
ಶಿಕ್ಷಣ ತಜ್ಞರಾದ ಮಹೇಂದ್ರ ಸಿಂಘಿ ಅವರು ಈ ವೇಳೆ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು. ಜೈನ ಸಮಾರಂಭಗಳಲ್ಲಿ ಹೆಚ್ಚಾಗಿ ಪೊಲೀಸರು ಯಾಕೆ ಇರುವುದಿಲ್ಲವೆಂದರೇ, ಸಮಾರಂಭವನ್ನು ಶಾಂತಿಯುತವಾಗಿ ಪೂರ್ಣಗೊಳಿಸಲು ಜೈನ್ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಶಿಸ್ತಿನ ಮತ್ತು ಶಾಂತಿಯ ಸಿಪಾಯಿಯಂತೆ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಾನೆ. ಜೈನ್ ಸಮಾಜಕ್ಕೆ ರಾಜಕೀಯ ಸ್ಥಾನಮಾನವನ್ನು ನೀಡಲಾಗುತ್ತಿಲ್ಲ. ಆದರೇ, ಅಹಿಂಸೆಯ ದಾರಿಯಲ್ಲೇ ತನ್ನ ಹಕ್ಕಿಗಾಗಿ ಜೈನ್ ಸಮಾಜ ತನ್ನ ಹೋರಾಟವನ್ನು ಮುಂದುವರೆಸಿದೆ ಎಂದರು.
ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು, ಹಿಂದೆಲ್ಲೂ ಕಾಣದಂತಹ ಶಾಂತಿಯುತ ಹಬ್ಬದ ಆಚರಣೆಯನ್ನು ಬೆಳಗಾವಿಯಲ್ಲಿ ಜೈನ್ ಸಮಾಜದಿಂದ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಸಮಾನತೆಯನ್ನು ಕಾಪಾಡಲು ಜೈನ್ ಸಮಾಜ ಮಾದರಿಯಾಗಿದೆ.
ಮಹಾಪೌರರಾದ ಮಂಗೇಶ್ ಪವಾರ್ ಅವರು, ಭಗವಾನ್ ಮಹಾವೀರರು ಸಂಪೂರ್ಣ ಜಗತ್ತಿಗೆ ಅಹಿಂಸಾ ಪರಮೋ ಧರ್ಮದ ಸಂದೇಶವನ್ನು ನೀಡಿದ್ದಾರೆ. ಅದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ, ಯುದ್ಧ ಕದನಗಳು ಎಲ್ಲಿಯೂ ನಡೆಯುವುದಿಲ್ಲ ಎಂದರು.
ಐಇಎಸ್ ಅಧಿಕಾರಿ ಅಜಯ್ ಜೈನ್ ಭಗವಾನ್ ಮಹಾವೀರರು ಇಡೀ ವಿಶ್ವಕ್ಕೆ ಶಾಂತಿ ಅಹಿಂಸೆಯ ಸಂದೇಶವನ್ನು ನೀಡಿದ್ದಾರೆ. ಅವರ ತತ್ವಾ ಸಿದ್ಧಾಂತಗಳನ್ನು ಮೈಗುಡಿಸಿಕೊಂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕೇರಳದ ಕೇಂದ್ರಿಯ ವಿಶ್ವ ವಿದ್ಯಾಲಯದ ಕುಲಪತಿಗಳಾದ ಸಿದ್ಧು ಅಲಗೂರ, ಐಇಎಸ್ ಅಧಿಕಾರಿ ಅಜಯ್ ಜೈನ್ ಮತ್ತು ಶಿಕ್ಷಣ ತಜ್ಞರಾದ ಮಹೇಂದ್ರ ಸಿಂಘಿ ಅವರನ್ನು ಈ ವೇಳೆ ಗಣ್ಯರು ಸತ್ಕರಿಸಿದರು. ನಂತರ ಹಳ್ಳಿಯ ಸಂದೇಶ ದಿನಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ನಂತರ ಟಿಳಕಚೌಕಿನಲ್ಲಿ ಎಲ್ಲ ಗಣ್ಯರು ಪೂಜೆಯನ್ನು ಸಲ್ಲಿಸಿ, ಜೈನ್ ಧ್ವಜವನ್ನು ಹಾರಿಸಿ, ಭಗವಾನ್ ಮಹಾವೀರರ ಶೋಭಾಯಾತ್ರೆಗೆ ಚಾಲನೆಯನ್ನು ನೀಡಿದರು. ಶಾಸಕ ಅಭಯ್ ಪಾಟೀಲ್ ಅವರು ಸ್ವತಃ ಟ್ರ್ಯಾಕ್ಟರ್ ಡ್ರೈವ್ ಮಾಡಿ ಶೋಭಾಯಾತ್ರೆಯನ್ನು ಆರಂಭಿಸಿದ್ದು, ವಿಶೇಷವಾಗಿತ್ತು.
ಈ ಶೋಭಾ ಯಾತ್ರೆಯಲ್ಲಿ ಭಗವಾನ್ ಮಹಾವೀರರ ಇತಿಹಾಸ, ಅವರ ಸಿದ್ಧಾಂತಗಳು, ಣಮೋಕಾರ ಮಂತ್ರದ ಸಾರ ಸೇರಿದಂತೆ ಸುಮಾರು 40 ರೂಪಕಗಗಳು ಭಾಗಿಯಾಗಿದ್ದವು. ಟಿಳಕಚೌಕಿನಿಂದ ಆರಂಭಗೊಂಡ ಶೋಭಾಯಾತ್ರೆಯೂ ಕಪಿಲೇಶ್ವರ ಮೇಲ್ಸೇತುವೆ, ಡಾ.ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆ, ಶಹಾಪೂರ ಮಾರ್ಗವಾಗಿ ಮಹಾವೀರ ಭವನಕ್ಕೆ ತಲುಪಿ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಜೈನ್ ಸಮಾಜದ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.