ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೂಡಲಸಂಗಮದ ಪೀಠವನ್ನು ಬಳಸಿಕೊಳ್ಳುತ್ತಿದ್ದಾರೆ. 20ವರ್ಷಗಳ ಹಿಂದೆ ಹರಿಹರದ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಪೀಠವನ್ನು ಕೂಡಲಸಂಗದಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ವಿಜಯಪುರದಲ್ಲಿ ಬಿಜೆಪಿ ಮುಖಂಡ ಸಂಜಯ ಕನಮಡಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ವಿಜಯಪುರ ನಗರದಲ್ಲಿ ನಡೆದ ಪಂಚಮಸಾಲಿ ಮುಖಂಡರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಂಚಮಸಾಲಿ ಪೀಠದ ಶ್ರೀಗಳು ಬಸವ ಜಯಮೃತ್ಯುಂಜಯ ಶಾಸಕ ಯತ್ನಾಳ್ ಅವರಿಗೆ ಬೆಂಬಲ ನೀಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಇನ್ನೊಬ್ಬ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಶಾಸಕ ಯತ್ನಾಳರ ಮೇಲೆ ಹರಿಹಾಯ್ದು ಶಾಸಕ ಯತ್ನಾಳ್ ಹಂದಿ ಹಾಗೆ ಮಾತನಾಡುವುದು ಬಿಡಬೇಕು. ಯತ್ನಾಳ್ ಅವರಿಗೆ ಮೈಕ್ ಸಿಕ್ಕರೆ ಸಾಕು ಹಂದಿಗೆ ಇದು ಸಿಕ್ಕ ಹಾಗೆ, ಹಾಗೆ ನಮ್ಮ ನಾಯಕರಿಗೆ ಮಾತನಾಡುವುದು ನಿಲ್ಲಿಸಬೇಕು ಇಲ್ಲವಾದರೆ ನಾವು ನಿಮ್ಮ ಬಗ್ಗೆ ಮಾತನಾಡುತೇವೆ. ನಿಮ್ಮ ಈ ಮಾತಿನಿಂದ ಪಕ್ಷ ನಿಮ್ಮನು ಉಚ್ಚಾಟನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ವಿಜೂಗೌಡ ಪಾಟೀಲ್ ಆರೋಪಿಸಿದರು. ಕೂಡಲೇ ಯತ್ನಾಳ್ ಹಂದಿ ಹಾಗೆ ಮಾತನಾಡುವುದು ಬಿಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ಸುರೇಶ ಬಿರಾದಾರ, ಕಾಸುಗೌಡ ಬಿರಾದಾರ ಸೇರಿದಂತೆ ಹಲವು ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು