Bagalkot

ಬತ್ತಿದ ಜೀವನದಿ ಕೃಷ್ಣೆ…ಜಮಖಂಡಿಯಲ್ಲಿ ನೀರಿಗಾಗಿ ಹಾಹಾಕಾರ…

Share

ಬಿರು ಬೇಸಿಗೆಯಲ್ಲಿ ಕೃಷ್ಣಾ ನದಿ ನೀರು ಖಾಲಿ ಖಾಲಿಯಾಗಿದ್ದು, ಜಮಖಂಡಿಯ ನದಿ ಪಾತ್ರದ ಜನರಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜೀವನದಿ ಕೃಷ್ಣೆ ಬತ್ತಿ ಹೋಗಿದೆ. ಮುತ್ತೂರು ಮೈಗೂರು, ಕಂಕನವಾಡಿ, ಹಾಗೂ ತುಬಚಿ ಗ್ರಾಮದ ಕೃಷ್ಣಾನದಿ, ನೀರಿಲ್ಲದೆ ಜನ ಜಾನುವಾರುಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಮಖಂಡಿ ತಾಲೂಕಿನ‌ ಕೃಷ್ಣ ನದಿಗೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಬಹುತೇಕ ಹಿಪ್ಪರಗಿ ಜಲಾಶಯದಲ್ಲಿ 3 ಟಿಎಂಸಿ ನೀರು ಸಂಗ್ರಹವಾಗಿದೆ. ಹಿಪ್ಪರಗಿ ಜಲಾಶಯ ದಿಂದ 1 ಟಿಎಂಸಿ ನೀರು ಬಿಡುತ್ತೇವೆಂದು ಅಧಿಕಾರಿಗಳು ಹುಸಿ ಭರವಸೆಯನ್ನು ನೀಡಿದ್ದಾರೆ.

ಹಿಡಕಲ್ ಜಲಾಶಯದಿಂದ ನೀರು ಹರಿಸಲು ಮಾಜಿ ಶಾಸಕ ಆನಂದ್ ನ್ಯಾಮಗೌಡ ಡಿಸಿಎಂಗೆ ಮನವಿ ಮಾಡಿದ ರೈತರು ಬೆಳೆ ಉಳಿಸಿಕೊಳ್ಳಲು ನೀರು ಹರಿಸುವಂತೆ ಒತ್ತಾಯಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮುತ್ತೂರು ಭಾಗದ ರೈತ ಭೀಮು ಹಿಪ್ಪರಗಿ ನೀರು ಬಿಡದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

error: Content is protected !!