ಕಾರನಲ್ಲಿ ಮದ್ಯ ಸೇವಿಸಿ ಕುಳಿತಿದ್ದ ವ್ಯಕ್ತಿ ಹೃದಯಾಘಾತವಾಗಿ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಧಾರವಾಡ ನರೇಂದ್ರ ಬೈ ಪಾಸ್ ಬಳಿ ಬಾರ ಮುಂಭಾಗದಲ್ಲಿ ನಡೆದಿದ್ದು, ಸ್ಥಳೀಯರು ವ್ಯಕ್ತಿಯ ಸಾವಿನ ಸುದ್ದಿ ಕೇಳಿ ಬೆಚ್ಚಬಿದಿದ್ದಾರೆ.

ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಇಪ್ಪತರೊಂಬತ್ತ ವರ್ಷದ ನಿವಾಸಿಯಾದ ಮಂಜುನಾಥ ದಳವಾಯಿ ಸಾವನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಮಂಜುನಾಥ ಬಾರ್‌ಗೆ ಬಂದಿದ್ದನಂತೆ. ಮದ್ಯ ಪಾರ್ಸಲ್ ತೆಗೆದುಕೊಂಡು ಸುಜುಕಿ ಕಂಪನಿಯ ಕಾರಿನಲ್ಲಿ ಮದ್ಯ ಸೇವಿನೆ ಮಾಡಿದ್ದಾರಂತೆ. ಆದರೆ ಮದ್ಯ ಸೇವನೆಯ ನಂತರ ವ್ಯಕ್ತಿ ಹಲವು ಗಂಟೆಗಳ ಕಾಲ್ ಕಾರನಲ್ಲಿಯೇ ಇರುವುದನ್ನು ನೋಡಿದ ಸ್ಥಳೀಯರು, ಅನುಮಾನಗೊಂಡು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಬಾರ್ ಸಿಬ್ಬಂದಿ ಗಮನಕ್ಕೆ ತಂದು ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.