ಬೆಳಗಾವಿ: ಕಳೆದ ಏ.1 ರಂದು ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದಲ್ಲಿ ಶಿವನಗೌಡ ಪಾಟೀಲ್ ಕೊಲೆ ಪ್ರಕರಣದಲ್ಲಿ ಆತನ ಹೆಂಡತಿ ಹಾಗೂ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.

ರುದ್ರಪ್ಪ ಹೊಸಟ್ಟಿ ಶಿವನಗೌಡನ ದೂರದ ಸಂಬಂಧಿಯಾಗಿರುತ್ತಾನೆ. ಶೈಲಾ ಹಾಗೂ ಶಿವನಗೌಡ ರುದ್ರಪ್ಪನ ಮನೆಗೆ ಹೋದಾಗ ಪರಿಚಯವಾಗಿರುತ್ತದೆ. ರುದ್ರಪ್ಪನಿಗೆ ಶಿವನಗೌಡ ಮನೆಗೆ ಸೇರಿಸಿಕೊಳ್ಳಬೇಡಿ ಎಂದು ರುದ್ರಪ್ಪನ ಕುಟುಂಬಸ್ಥರು ಹೇಳಿದ್ದರು ಎಂದರು. ಏ.1 ರಂದು ಶಿವನಗೌಡನ ಗೆಳೆಯ ಮೊಬೈಲ್ ನಿಂದ ಕರೆ ಮಾಡಿದ್ದ ರುದ್ರಪ್ಪ ಹಿರೇಬಾಗೇವಾಡಿ ಬಾರ್ ನಲ್ಲಿ ಕುಡಿದು ಬೆಳಗಾವಿಯ ನಿಯಾಜ್ ನಲ್ಲಿ ಊಟ ಮಾಡಿದ್ದಾರೆ. ಬಳಿಕ ಮತ್ತೇ ಹಿರೇಬಾಗೇವಾಡಿಯಲ್ಲಿ ಮದ್ಯ ಖರೀದಿ ಮಾಡಿ ವಿಷ ತೆಗೆದುಕೊಂಡಿದ್ದ ರುದ್ರಪ್ಪ ಸೆವೆನ್ ಅಪ್ ನಲ್ಲಿ ಮಿಶ್ರಣ ಮಾಡಿ ಕುಡಿಸಿದ್ದ ಆದರೂ ಶಿವನಗೌಡ ಮೃತಪಟ್ಟಿರಲಿಲ್ಲ ಎಂದರು.
ಗಾಡಿಕೊಪ್ಪ ಗ್ರಾಮದ ಜಮೀನು ಒಂದರಲ್ಲಿ ಕುಡಿದ ಮತ್ತಿನಲ್ಲಿದ್ದ ಶಿವನಗೌಡ ಮೇಲೆ ಕಲ್ಲು ಎಸೆದು ಕೊಲೆ ಮಾಡಿ ಪರಾರಿಯಾಗಿದ್ದ ರುದ್ರಪ್ಪನನ್ನು ಕಲಬುರಗಿಯಲ್ಲಿ ಬಂಧಿಸಿದ್ದಾರೆ ಎಂದರು.