Bagalkot

ರಾತ್ರೋರಾತ್ರಿ ಒಂದಲ್ಲ, ಎರಡಲ್ಲ 13 ಲಕ್ಷ ರೂ. ಮೌಲ್ಯದ ಹಂದಿಗಳನ್ನು ಕದ್ದ ಖದೀಮರು…!!!

Share

ಇಷ್ಟು ದಿನ ಮನೆಗಳ ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ತೋಟದ ಮನೆಯ ಬೀಗ ಮುರಿದು ಒಟ್ಟು 13 ಲಕ್ಷದ 45 ಹಂದಿಗಳನ್ನು ಕಳ್ಳತನ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಗೋರ್ಬಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಇನ್ನು ಶರವೇಗದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಗೋರ್ಬಾಳ ಗ್ರಾಮದ ಹೊರವಲಯದಲ್ಲಿರುವ ರಾಮಪ್ಪ ಭಜಂತ್ರಿ ಎಂಬುವರಿಗೆ ಸೇರಿದ ತೋಟದ ಮನೆಯ ಬೀಗ ಮುರಿದು ಒಳಹೊಕ್ಕ ಕಳ್ಳರು ಒಟ್ಟು 13 ಲಕ್ಷದ 45 ಹಂದಿಗಳನ್ನು ಕಳ್ಳತನ ಮಾಡಿದ್ದಾರೆ. ಹಂದಿ ಕಳ್ಳರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ರಾಮಪ್ಪ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಶರವೇಗದಲ್ಲಿ ಕಾರ್ಯಾಚರಣೆಯನ್ನು ನಡೆಸಿ, ಹಂದಿ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಕಳ್ಳರನ್ನು ಬಂಧಿಸಿ, ಸುಮಾರು 4 ಲಕ್ಷ 58 ಸಾವಿರ ರೂಪಾಯಿ ನಗದು ಮತ್ತು ವಾಹನಗಳು ಸೇರಿದಂತೆ ಒಟ್ಟು 12 ಲಕ್ಷ 59 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇಳಕಲ್ ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Tags:

error: Content is protected !!