ರಾಯಬಾಗ : ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬರಹ ಮಠದಲ್ಲಿ ಶ್ರೀ ಸಿದ್ದಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಅತಿ ವಿಜ್ರಂಭಣೆಯಿಂದ ಜರುಗುತ್ತಿದೆ. ನಾನಾ ರಾಜ್ಯಗಳಿಂದ ಆಗಮಿಸಿರುವ ಭಕ್ತರು ಶ್ರೀ ಯಲ್ಲಾಲಿಂಗ ಮಹಾರಾಜರ ಕರ್ತೃಗದ್ದಿಗೆ ಹಾಗೂ ಶ್ರೀ ಮಠದ ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಡಾಕ್ಟರ್ ಮುರುಘರಾಜೇಂದ್ರ ಮಹಾಸ್ವಾಮಿಜಿಯವರ ದರ್ಶನ ಆಶೀರ್ವಾದ ಪಡೆದು ಸಂಭ್ರಮಿಸುತಿದ್ದಾರೆ. ಇದೇ ವೇಳೆ ಶ್ರೀಗಳ ತುಲಾಭಾರ ಕಾರ್ಯಕ್ರಮ ಜರುಗಿತು.

ಭಕ್ತರನು ಉದ್ದೇಶಿಸಿ ಮಾತನಾಡಿರುವ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಕಳೆದ ಬಾರಿ ಜಿಡಿಗಾ ಶ್ರೀಮಠದಲ್ಲಿ ನೂರು ಬಡ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ವರ್ಷವೂ ಸಹ ಮತ್ತೆ ಹೊಸದಾಗಿ ನೂರು ಮಕ್ಕಳಿಗೆ ಉಚಿತ ಶಿಕ್ಷಣದ ಪ್ರವೇಶ ತೆಗೆದುಕೊಳ್ಳಲಾಗುತ್ತಿದೆ. ಅದರಂತೆ ಮುಗಳಖೋಡ ಶ್ರೀಮಠದಲ್ಲಿ ಸಹ ಈ ವರ್ಷದಿಂದ ನೂರು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದರು. ಕೋಳಿಗುಡ್ಡ ಭಕ್ತರಿಂದ ಮದ್ದು ಸುಡುವ ಕಾರ್ಯಕ್ರಮ ನೆರವೇರಿತು. ಅಪ್ಪಾಜಿ ಕಲಾ ಬಳಗದಿಂದ ಸಂಗೀತ ಸೇವೆ ಸಾದರಪಡಿಸಲಾಯಿತು.