ಹುಕ್ಕೇರಿ ನಗರದಲ್ಲಿ ಮುಸಲ್ಮಾನರು ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದರು.
ಮುಸಲ್ಮಾನರ ಪ್ರಮುಖ ಹಬ್ಬವಾದ ಈದ್ ಉಲ್ ಫಿತರ್ ಅತ್ಯಂತ ಆನಂದದ,ಅತಿ ಪವಿತ್ರವಾದ ಹಬ್ಬ ಈದ್ ಎಂದರೆ ಸಂತೋಷ ಪ್ರತಿ ವರ್ಷ ಮರಳಿ ಬರುವದು, ಅಲ್ ಫಿತರ ಎಂದರೆ ಉಪವಾಸ ಮುಗಿಸುವದು ,ರಮಜ್ ಎಂದರೆ ಬಿಸಿಲಿನ ಬೇಗೆ ಎಂದು ಪಾಪಗಳು ಸುಟ್ಟು ಬೂದಿಯಾಗುವದು ಎಂದು ಅರ್ಥ ,
ಲೌಕೀಕ ಕಾಮನೆಗಳಿಂದ ಮುಕ್ತರಾಗಿ ಅಲ್ಲಾನ ಚಿಂತನೆ ನಡೆಸಿ ನೀರು ಆಹಾರಗಳನ್ನು ಸೇವಿಸದೆ ಮಾಡುವ ಅತ್ಯಂತ ಕಠಿಣವಾದ ವೃತ ರಂಜಾನ್ ಹಬ್ಬದ ವೈಶಿಷ್ಟ್ಯ.
ದಾನ ಧರ್ಮದ ಪ್ರತೀಕ ಈದ್ ಉಲ್ ಫೀತ್ ಉಪವಾಸ ಒಂದು ತಿಂಗಳ ಕಾಲ ಪ್ರತಿ ನಿತ್ಯ ಮನೆಗಳಲ್ಲಿ ಹಾಗೂ ಮಸೀದಿಗಳಲ್ಲಿ ಕುರಾನ್ ಪಠಣ ಮಾಡಿ ಜಕಾತ್ ನೀಡುತ್ತಾರೆ ಅಂದರೆ ಬಡವರಿಗೆ ದಾನ ನೀಡುತ್ತಾರೆ.ತ್ಯಾಗ ಹಾಗೂ ಕಷ್ಟ, ಸಹಿಷ್ಣುತೆಯ ಸಂಕೇತವಾದ ಒಂದು ತಿಂಗಳ ರೋಜಾ ಉಪವಾಸ ಆಚರಣೆ ನಂತರ ಚಂದ್ರಣ ದರ್ಶನ ಮಾಡಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಹಬ್ಬವೇ ಪವಿತ್ರ ರಂಜಾನ್.
ಹನ್ನೊಂದು ಜಮಾತ ಸದಸ್ಯರು ಹುಕ್ಕೇರಿ ನಗರದ ಖಾಲಿ ಮಶಿದಿ,ಜುಮ್ಮಾ ಮಶೀದಿ, ಮಕ್ಕಾ ಮಸೀದಿ ಮತ್ತು ಮರಕಜ ಮಸೀದಿ ಮತ್ತು ಗಜಬರವಾಡಿಯ ಇದ್ಗಾ ಮತ್ತು ಅರ್ಜುನವಾಡ ರಸ್ತೆಯ ಈದ್ಗಾ ಮೈದಾನಕ್ಕೆ ತೇರಳಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು, ಇಮಾಮ್ ಖಾಜಿ ಸಾಹೇಬರು ನೇರೆದ ಜನರಿಗೆ ಧರ್ಮದ ಉಪದೇಶ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಮೌಲಾನಾ ಬಾಬಾಮಿಯಾ ಖಾಜಿ ಕಳೆದ ಒಂದು ತಿಂಗಳಿನಿಂದ ಉಪವಾಸ ವೃತ ಆಚರಿಸಿ ಇಂದು ಸಮಸ್ತ ಮುಸಲ್ಮಾನ ಭಂದುಗಳು ಸಾಮೂಹಿಕ ಪ್ರಾರ್ಥನೆ ಗೈದು ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಬಂದು ಹಿಂದೂ ಮುಸ್ಲಿಮರು ಭಾವೈಕ್ಯ ದಿಂದ ಬಾಳಲಿ ಎಂದು ಆ ಅಲ್ಲಾನಲ್ಲಿ ಕೆಳಿಕೊಳ್ಳಲಾಯಿತು ಎಂದರು.
ನಂತರ ಹಿರಿಯರು ಮಕ್ಕಳು ಪರಸ್ಪರ ಶುಭಾಶಯ ಹಂಚಿಕೊಂಡರು.
ಹನ್ನೊಂದು ಜಮಾತ ಅದ್ಯಕ್ಷ ಸಲಿಂ ನದಾಫ್ ಮಾತನಾಡಿ ಒಂದು ತಿಂಗಳು ಉಪವಾಸ ಆಚರಿಸಿ ಹಿಂದೂ, ಮುಸ್ಲಿಂ ಬಾಂಧವರಿಗೆ ಒಳ್ಳೆಯದಾಗಲಿ ಎಲ್ಲರೂ ಒಂದಾಗಿ ದೇಶದ ಪ್ರಗತಿಗೆ ಸಹಕಾರಿಯಾಗೋಣ ಎಂದರು
ಗಜಬರವಾಡಿಯಲ್ಲಿ ರಾಜು ಮುಜಾವರ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು.
ಈ ಸಂದರ್ಭದಲ್ಲಿ ಅಂಜುಮನ ಕಮೀಟಿ ಅದ್ಯಕ್ಷ ಅಹಮ್ಮದ ಬಾಗವಾನ, ಚಿಕ್ಕೋಡಿ ಜಿಲ್ಲಾ ವಕ್ತ ಬೋರ್ಡ ನಿರ್ದೆಶಕ ಶಹಜಾನ ಬಡಗಾಂವಿ, ಮೌಲಾನಾ ಬಾಬಾಮಿಯಾ ಖಾಜಿ, ಡಿ ಆರ್ ಖಾಜಿ, ಇರ್ಷಾದ ಮೋಕಾಶಿ, ಜಾವಿಧ ನದಾಪ್, ಕೇಸರ ಮೋಕಾಶಿ, ಫಾರೂಕ ಮುಲ್ಲಾ, ರುಕ್ಮುದ್ದಿನ ಮುಲ್ಲಾ, ಶೋಹೇಬ ರಜಾ, ತಾಸಿನ ರಜಾ, ನಾಶೀರ ಸುತಾರ ಹಾಗೂ ಹನ್ನೊಂದು ಜಮಾತ ಸದಸ್ಯರು ,ಮುಸಲ್ಮಾನ ಬಾಂಧವರು ಪ್ರಾರ್ಥನೆ ಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಷಯ ಹಂಚಿಕೊಂಡರು.