ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ತೋಟದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬದ ಗುಡುಸಲಿಗೆ ಆಕಸ್ಮಿಕ ಬೆಂಕಿ ತೊಗಲಿ ನಾಲ್ಕು ಮೇಕೆಗಳು, ಒಂದು ಆಕಳು ಸುಟ್ಟು ಕರ್ಕಲಾಗಿದ್ದು ಒಂದು ಎಮ್ಮೆ ಹಾಗು ಒಂದು ಹಸು ಶೇಕಡೂ 50 ರಷ್ಟು ಗಾಯಗೊಂಡಿವೆ, ಅಲ್ಲದೆ ಕೂಲಿ ಮಾಡಿ ದುಡಿಮೆಯಿಂದ ಸಂಗ್ರಹಿಸಿದ 25000 ರೂಪ್ಪಾಯಿ ಬೆಂಕಿಗೆ ಆವುತಿ ವಾಗಿವೆ ಇದರಿಂದ ಕುಟುಂಬದಲ್ಲಿಯ ಮಹಿಳೆಯರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದರು.

ಶನಿವಾರ ರಾತ್ರಿ 12 ಗಂಟೆ ಸುಮಾರು ಇಮಾಮ ಲಾಜಂ ಪಟೇಲ ಈ ಮುಸ್ಲಿಂ ಸಮಾಜದ ಕುಟುಂಬದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಹಾನಿಯಾಗಿದೆ.

ಐದು ಮೇಕೆ ಮರಿಗಳು ಕಾಪಾಡಿಗೊಂಡ ರುಕ್ಸನಾ ಪಟೇಲ: ಇಮಾಮ ಪಟೇಲ ಈ ರೈತ ಉಗಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಟ ಮಾಡುತ್ತಿದ್ದನು. ಸಕ್ಕರೆ ಕಾರ್ಖಾನೆ ಹಂಗಾಮ ಮುಕ್ತಾಯಗೊಂಡಿದ್ದರಿಂದ ಎಲ್ಲರೂ ಒಂದುಗೂಡಿ ಗದ್ದೆಯಲ್ಲಿ ಬೆಳೆದ ಜೋಳ ತೆಗೆಯುತ್ತಿದ್ದರು, ರಾತ್ರಿ ಸುಮಾರು 12 ಗಂಟೆಗೆ ಗುಡಿಸಲಿಗೆ ಬೆಂಕಿ ತುಗಲಿದ ಕಂಡು ಬಂತು. ಮನೆಯವರು ಮಹಿಳೆಯರು ಪ್ರಯತ್ನಿಸಿ ಅಲ್ಲಿಗೆ ಇರುವ ಧನಕರುಗಳು ಬೆಂಕಿಯಿಂದ ಉಳಿಸಿಕೊಳ್ಳಲು ಪ್ರಯತ್ನಿಸಿದರು.
ಆದರು ಸೊಸೆಯಾದ ರುಕ್ಸನಾ ಪಟೇಲ ಇವಳ ಮುಖಕ್ಕೆ ಹಾಗೂ ಕೈಗಳು ಬೆಂಕಿಯಿಂದ ಗಾಯಗೊಂಡಿವೆ. ಅಷ್ಟರಲ್ಲಿ ಪ್ರಯತ್ನಿಸಿ ಒಂದು ಆಕಳು ಒಂದು ಎಮ್ಮೆ ಉಳಸಿಕೊಂಡಿದ್ದಾರೆ.
ಆಶ್ಚರ್ಯ ಎಂದರೆ ನಾಲ್ಕು ಮೇಕೆಗಳು ಸ್ಥಳದಲ್ಲಿ ಸುಡುತ್ತಿರುವಾಗ ಮೇಕೆಗಳ ಐದು ಮರಿಗಳು ಅವುಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಅವುಗಳನ್ನು ತೆಗೆದುಕೊಂಡು ಒಂದು ಬ್ಯಾರೆಲ್ನಲ್ಲಿ ಕೂಡ ಹಾಕಿದ್ದಾರೆ ಕಾರಣ ದಗದಗ ಎಂದು ಉರಿತಿರುವ ಬೆಂಕಿಯಲ್ಲಿ ಮತ್ತು ಓಡಿ ಬರುತ್ತಿರುವುದನ್ನು ಕಂಡು ಮರಿಗಳನ್ನು ಉಳಿಸಿಕೊಂಡಿದ್ದಾರೆ. ಇದನ್ನು ರುಕ್ಸನಾ ಪಟೇಲ್ ಹಾಗೂ ಅವರು ತಾಯಿ ಕಣ್ಣೀರು ಹಾಕುತ ತಮ್ಮ ಅಳಲುವನ್ನು ತೋಡಿಕೊಂಡರು.
ಇಮಾಮ ಪಟೇಲ ಈ ರೈತ ಕಳೆದ ಅನೇಕ ದಿನಗಳಿಂದ ಹೊಲದಲ್ಲಿ ಕೂಲಿ ಮಾಡುತ್ತಾ 25 ಸಾವಿರ ಹಣ ಸಂಗ್ರಹಿಸಿ ಇಟ್ಟಿದ್ದನು. ಕಾರಣ ರಮಜಾನ ಈದ್ ಹಬ್ಬ ಬಂದಿದ್ದು ಮಕ್ಕಳಿಗೆ, ತಾಯಿಗೆ, ಪತ್ನಿಗೆ ಹೊಸ ಬಟ್ಟೆ ತರುವ ಉದ್ದೇಶವಾಗಿತ್ತು. ಆದರೆ ಆತನು ಕೂಡಿ ಹಾಕಿದ ಎಲ್ಲ ಹಣವನ್ನು ಬೆಂಕಿಯಲ್ಲಿ ಆಹುತಿಯಾಗಿದೆ.
ಸ್ಥಳಕ್ಕೆ 112 ಪೆÇಲೀಸ್ ಇಲಾಖೆ ಆರ್.ಎಸ್.ಜಾಗನೂರ್ ಭೇಟಿ ನೀಡಿದರು. ಪಶು ಇಲಾಖೆಯ ವೈದ್ಯಾಧಿಕಾರಿ ಅಭಿನಂದಣ ಪಾಟೀಲ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದ ಬಗ್ಗೆ ಹೇಳಿದರು. ಜಕಮಗೊಂಡ ಎಮ್ಮೆ ಹಾಗೂ ಹಸುಗೆ ಉಪ್ಪಚಾರಿಸಿದರು. ರೈತನಿಗೆ ಸುಮಾರು 5 ಲಕ್ಷದಷ್ಟು ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಇಲ್ಲಿಯ ರೈತರಾದ ವಿನಾಯಕ ಕಾಂಬಳೆ, ಶಾಂತಿನಾಥ್ ಪಾಟೀಲ್, ಸುಲೇಮಾನ್ ಪಟೇಲ್, ಮೀರಾ ಪಟೇಲ್, ಸುರೇಶ್ ಪಟೀಲ್, ಅಡಿವೇಶ ಗಾಣಿಗೇರ ಇವರು ಘಟ್ಟಣಾ ಸ್ಥಳಕೆ ಧಾವಿಸಿ ರೈತನಿಗೆ ಸಹಕರಿಸಿದರು.
ರಂಜಾನ ಹಬ್ಬ ಪ್ರಾರಂಭವಿದ್ದು ಎಲ್ಲರೂ ಉಪವಾಸ ಮಾಡುತ್ತಾರೆ. ಈ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು. ಗುಡಿಸಲು ಸುಟ್ಟುಹೋದ ಬಳಿಕ ಅದರಲ್ಲಿರುವ ಎಲ್ಲ ಸಂಸಾರ ಸಾಹಿತ್ಯ ಭಸ್ಮ ಆಗಿದೆ. ಇನು ಮುಂದಿನ ಜೀವನ ಹೇಗೆ ಎಂದು, ಕುಟುಂಬದವರು ತಮ್ಮ ಅಳಲುವನ್ನು ತೋಡಿಕೊಂಡರು. ಉಗಾರ ಸಕ್ಕರೆ ಕಾರ್ಖಾನೆ ಉದ್ಯಮಿಗಳು, ಜನಪ್ರತಿನಿಧಿಗಳು ಸಹಕರಿಸಬೇಕೆಂದು ಕೆಲ ಹಿರಿಯ ರೈತರು ಕೇಳಿಕೊಂಡರು.