Kagawad

ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾರಿಂದ ಅವಮಾನ ಹಕ್ಕುಚುತಿ ಮಂಡಿಸುವೆ- ಶಾಸಕ ರಾಜು ಕಾಗೆ

Share

ಕಾಗವಾಡ: ರಾಜ್ಯ ಸರಕಾರದಲ್ಲಿ ಕಂದಾಯ ಇಲಾಖೆಯ ರಾಜ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಇವರು ಶಾಸಕರಿಗೆ ಅವಮಾನಿಸಿದ್ದಾರೆ. ಅಲ್ಲದೇ, ತಾವು ತೆಗೆದುಕೊಂಡು ನಿರ್ಣಯವೇ ಅಂತಿಮ ನಿರ್ಣಯವೆಂದು ಹೇಳಿ, ನಾವು ಹೇಳಿದ ಮಾತನ್ನು ಕೇಳದೇ ಅವಮಾನಿಸಿದ್ದಾರೆ. ಇದ್ದರಿಂದ ಅಧಿವೇಶನದಲ್ಲಿ ಅವರ ಬಗ್ಗೆ ಹಕ್ಕುಚ್ಯೂತಿ ಮಂಡನೆ ಮಾಡುವ ನಿರ್ಣಯ ಕೈಗೊಂಡಿದ್ದೇನೆಂದು ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷರು, ಕಾಗವಾಡ ಶಾಸಕ ರಾಜು ಕಾಗೆ ಇನ್ ವಾಹಿನಿದೊಂದಿಗೆ ಮಾತನಾಡುವಾಗ ತಮ್ಮ ಬೇಸರ ಹೋರಹಾಕಿದರು.

ಶನಿವಾರ ರಂದು ಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಬೇರೆ-ಬೇರೆ ಇಲಾಖೆಗಳಿಂದ ಮಂಜೂರುಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಶಾಸಕ ರಾಜು ಕಾಗೆ ತಮ್ಮ ಬೇಸರ ಹೋರಹಾಕಿದರು. ನಾನು ಹಾಗೂ ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಇವರು ಕಂದಾಯ ಇಲಾಖೆಯ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಸತ್ಯಾಗ್ರಹ ಪ್ರಾರಂಭಿಸಿದ್ದಾಗ ಲಕ್ಷ್ಮಣ ಸವದಿ ಇವರು ರಾಜೇಂದ್ರ ಕಟಾರಿಯಾ ಇವರಿಗೆ ಗ್ರಾಮಲೇಕ್ಕಾಧಿಕಾರಿಗಳ ಬೇಡಿಕೆಗಳ ಬಗ್ಗೆ ಚರ್ಚಿಸಿ, ಒಳ್ಳೆಯ ನಿರ್ಣಯ ಕೈಗೊಳ್ಳಿರಿಯೆಂದು ಹೇಳಿದ್ದಾಗ, ಅವರಿಗೆ ಕೆಲಸವಿಲ್ಲಾ; ಅವರು ಸತ್ಯಾಗ್ರಹ ಪ್ರಾರಂಭಿಸಿದ್ದಾಗ ಅಷ್ಟೇನು ಕೇಳಿಕೊಳ್ಳುವ ಅವಶ್ಯಕವಿಲ್ಲವೆಂಬ ಬೇಜವಾಬ್ದಾರಿ ಉತ್ತರ ನೀಡಿದ್ದರು. ಇದನ್ನು ಕೇಳಿದಾಗ ನನಗೂ ಒಂದು ಕ್ಷಣ ಆಶ್ಚರ್ಯವಾಯಿತು.

ಕಾಗವಾಡದಲ್ಲಿ 8.60 ಕೋಟಿ ರೂ. ವೆಚ್ಚುಮಾಡಿ ಪ್ರಜಾಸೌಧ ಕಟ್ಟಡ ಕಟ್ಟಲು ಸ್ಥಳ ನಿಶ್ಚಿತಗೊಳಿಸಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಇದರ ಭೂಮಿಪೂಜೆ ನಡೆಯಬೇಕಾಗಿದೆ. ಆದರೆ, ನನ್ನನ್ನು ಅವಮಾನಿಸಿ ಹೀಗೆ ತರಾತೂರಿಯಲ್ಲಿ ಆಗುವುದಿಲ್ಲವೆಂದು ಹೇಳಿ ಅವಮಾನಿಸಿದ್ದಾರೆ. ನಾನು ಈ ಅಧಿವೇಶನದಲ್ಲಿ ಅವರು ಮಾಡಿರುವ ಅವಮಾನದ ಬಗ್ಗೆ ಹಕ್ಕುಚ್ಯೂತಿ ಮಂಡನೆ ಮಾಡುವ ನಿರ್ಣಯ ಕೈಗೊಂಡಿದ್ದೇನೆ.

ಇದನ್ನು ಸಚಿವರು, ಹಿರಿಯ ಅಧಿಕಾರಿಗಳು ಗಮನದಲ್ಲಿ ತೆಗೆದುಕೊಂಡು ಇಂಥಹ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಜರುಗಸದೇ ಹೋದರೆ ನಾವೆಲ್ಲ ಶಾಸಕರು ಬೇರೆ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆಯೆಂದು ಎಚ್ಚರಿಕೆ ನೀಡಿದರು.

ಸುಕುಮಾರ ಬನ್ನೂರೆ,

ಇನ್ ನ್ಯೂಸ್, ಕಾಗವಾಡ.

Tags:

error: Content is protected !!