ಗೋಕಾಕ: ಸಚಿವ ಸತೀಶ ಜಾರಕಿಹೊಳಿಯವರ ಸೂಚನೆ ಮೇರೆಗೆ ಇಂದು ನಗರದಲ್ಲಿನ ವಾಲ್ಮೀಕಿ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯನ್ನು ಲೋಕೋಪಯೋಗಿ ಅಧಿಕಾರಿಗಳೊಂದಿಗೆ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅವರು ಪರಿಶೀಲನೆ ನಡೆಸಿದರು.

ಬಹುವರ್ಷಗಳ ಹಳೆಯ ವಾಲ್ಮೀಕಿ ಕ್ರೀಡಾಂಗಣದ ಒಳಾಂಗಣ ಕಟ್ಟಡದ ಗೋಡೆ ಮತ್ತು ಛಾವಣೆ ಶಿಥಿಲಗೊಂಡಿದೆ. ಹೀಗಾಗಿ ಕ್ರೀಡೆಗಳನ್ನು ವಿಕ್ಷೀಸಲು ಕ್ರೀಡಾಭಿಮಾನಿಗಳಿಗೆ ಸಮಸ್ಯೆ ಆಗುತ್ತಿರುವುದನ್ನು ಮನಗಂಡ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರೀಡಾಂಗಣ ದುರಸ್ತಿಅಥವಾ ಕಟ್ಟಡ ಅಭಿವೃದ್ಧಿ (ಮರುನಿರ್ಮಾಣ) ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದರಂತೆ, ಲೋಕೋಪಯೋಗಿ ಅಧಿಕಾರಿಗಳು ಹಾಗೂ ರಾಹುಲ್ ಜಾರಕಿಹೊಳಿ ಅವರು ಇಂದು ವಾಲ್ಮೀಕಿ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕಟ್ಟಡದ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದರು.
ಈ ಲೋಕೋಪಯೋಗಿ ಅಧಿಕಾರಿಗಳಾದ ಸುರೇಶ ಗಸ್ತಿ, ವ್ಹಿ. ಎಸ್. ಪಾಟೀಲ, ಸಚಿವರ ಆಪ್ತ ಗೆಳೆಯರು ಶಿವು ಪಾಟೀಲ , ತಾಲೂಕಾ ಕ್ರೀಡಾ ಸಿಬ್ಬಂದಿ ಶಾನ್ಯೂಲ್ ನಗಾರಿ ತಾಲೂಕಾ ಕ್ರೀಡಾ ಸಿಬ್ಬಂದಿ, ಹಾಗೂ ಇತರರು ಇದ್ದರು.