Vijaypura

ಟ್ರ್ಯಾಕ್ಟರ್ ನಲ್ಲಿ ಲೋಡ್ ಮಾಡಿದ್ದ ಕಬ್ಬಿನಲ್ಲೇ ಭಾರತದ ನಕ್ಷೆ ಬಿಡಿಸಿದ ಯುವಕರು: ತ್ರೀವರ್ಣದಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರವಿಟ್ಟು ಕಬ್ಬು ಕಟಾವು ಯುವಕರ ಸಂಭ್ರಮ

Share

ನಕ್ಷೆಯನ್ನು ಬೋರ್ಡ್ ನಲ್ಲಿ ರಂಗೋಲಿಯಲ್ಲಿ ಬಿಡಿಸುವದನ್ನು ಕೇಳಿದ್ದಿವಿ, ನೋಡಿದ್ದಿವಿ. ಆದ್ರೆ ಇಲ್ಲಿ ಕೆಲ ಯುವಕರು ಟ್ರ್ಯಾಕ್ಟರ್ ನಲ್ಲಿ ಲೋಡ್ ಮಾಡಿದ್ದ ಕಬ್ಬಿನಲ್ಲೇ ಭಾರತದ ನಕ್ಷೆ ಬಿಡಿಸಿದ ಅಚ್ಚರಿ ಮೂಡಿಸಿದ್ದಾರೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ವಂದಾಲ ಗ್ರಾಮದ ಯುವಕರು ಕಬ್ಬು ಕಟಾವು ಮಾಡಿ ಟ್ರ್ಯಾಕ್ಟರ್ ಗೆ ಲೋಡ್ ಮಾಡಿ ಭಾರತ ನಕ್ಷೆ ಬಿಡಿಸಿದ್ದಾರೆ. ಕೇಸರಿ ಬಿಳಿ ಹಸಿರು ಬಣ್ಣದಿಂದ ನಕ್ಷೆಗೆ ಅಲಂಕಾರ ಮಾಡಿ ಸಂತಸ ಪಟ್ಟಿದ್ದಾರೆ.

ಇನ್ನೂ ನಕ್ಷೆಯಲ್ಲಿ ಸಂಗೋಳ್ಳಿ ರಾಯಣ್ಣ ಭಾವಚಿತ್ರವಿಟ್ಟು ಸಂಭ್ರಮಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ 20,151 ಟನ್ ಕಬ್ಬು ಕಟಾವು ಮಾಡಿ ಸಾಧನೆ ಮಾಡಿದ್ದು, ವಂದಾಲ ಗ್ರಾಮದ ಕಬ್ಬು ಕಟಾವು ಮಾಡುವ ಯುವಕರು ಹಂಗಾಮಿನ ಕಬ್ಬು ಕಟಾವು ಮಾಡುವ ಕೊನೆಯ ದಿನ ಈ ಮೂಲಕ ಸಂಭ್ರಮಿಸಿದ್ದಾರೆ. ಅಲ್ಲದೇ ಯುವಕರು ಟ್ರ್ಯಾಕ್ಟರ್ ಗೆ ಅಲಂಕಾರ ಮಾಡಿದ್ದಾರೆ.

Tags:

error: Content is protected !!