Belagavi

ಬೆಳಗಾವಿ: ಆರ್‌ಪಿಡಿ ಕಾಲೇಜು, ಚೆನ್ನಮ್ಮ ವಿವಿಯಿಂದ ಸ್ಪಾಯತ್ತತೆ, ಮೊದಲ ಫಲಿತಾಂಶ

Share

ಬೆಳಗಾವಿ: ಇಲ್ಲಿನ ಆರ್ ಪಿಡಿ ಕಾಲೇಜ ರಾಣಿ ಚನ್ನಮ್ಮ ವಿವಿ ಜೊತೆ ಸ್ನಾಯುತ (ಅಟೋನೊಮಸ್) ಹೊಂದಿದ ಮೊದಲ ಸಲ ಬಿಎ, ಬಿ.ಕಾಂ, ಬಿಬಿಎ ಮೊದಲ ಸೆಮಿಸ್ಟರ್ ಫಲಿತಾಂಶವು ಪರೀಕ್ಷೆ ಬರೆದ 11ದಿನದಲ್ಲಿ ಪ್ರಕಟಗೊಂಡಿದೆ ಎಂದು ಎಸ್. ವೈ. ಪ್ರಭು ಹೇಳಿದರು.

ಬುಧವಾರ ಬೆಳಗಾವಿಯ ಆರ್ ಪಿಡಿ ಕಾಲೇಜಿನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಎ ಮೊದಲ ಸೆಮಿಸ್ಟರ್ ನಲ್ಲಿ 89.90% ಮೊದಲ ಸ್ಥಾನದಲ್ಲಿ ಭಕ್ತಿ ರಾಜೇಶ ಕುರಕೋಟಿ ಪಡೆದುಕೊಂಡಿದ್ದರೆ, ರೋಹನ್ ರಾಜಶೇಖರ ಸನಾರಿ 88.50% ಎರಡನೇ ಸ್ಥಾನ ಪಡೆದಿದ್ದಾರೆ ಎಂದರು.
ಬಿ.ಕಾಂ ಮೊದಲ ಸೆಮಿಸ್ಟರ್ ನಲ್ಲಿ ವೈಭವಿ ದಳವಾಯಿ 87.50% , ಶೋಭಾ ಶಿಂಧೆ 86.0%, ಹೆಚ್ಚಿನ ಅಂಕ ಪಡೆದವರು, ಬಿಬಿಎ ಮೊದಲ ಸೆಮಿಸ್ಟರ್ ಬಲ್ಲಿ ಸ್ನೇಹಾ ಶೆಟ್ಟಿ 83.50%, ಅಂತೋನಿ ಫರ್ನಾಂಡೀಸ್ 80.90% ಅಂಕ ಪಡೆದಿದ್ದಾರೆ ಎಂದರು.


ಒಟ್ಟು ಬಿಎಯಲ್ಲಿ 141, ಬಿ.ಕಾಂ 99, ಬಿಬಿಎ 79 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಎಂದರು. ಪರೀಕ್ಷಾ ಶುಲ್ಕ ಒಟ್ಡು 500 ರೂ. ಪ್ರತಿ ವಿದ್ಯಾರ್ಥಿ ಕಡೆಯಿಂದ ಭರಿಸಿಕೊಳ್ಳಲಾಗಿತ್ತು ಎಂದರು. ಕಾಲೇಜು ಪ್ರಾಚಾರ್ಯ ಅಭಯ ಪಾಟೀಲ್, ಎಂ.ಎಸ್.ಕುರಳಿ, ಪ್ರೊ.ಅರವಿಂದ ಹಲಗೇಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!