Chikkodi

ಭೂಮಿಯ ಸವಳು- ಜವಳು ನಿರ್ಮೂಲನಾ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

Share

ಚಿಕ್ಕೋಡಿ:ಚಿಕ್ಕೋಡಿ -ಸದಲಗಾ ವಿಧಾನಸಭಾ ವ್ಯಾಪ್ತಿಯಲ್ಲಿ ಬರತಕ್ಕಂತ ಇಂಗಳಿ ಗ್ರಾಮದಲ್ಲಿ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಮಾರು 300 ಎಕರೆ ಸವಳು ಜವಳು ನಿರ್ಮೂಲನಾ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿಯವರು ಚಾಲನೆ ನೀಡಿದರು.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿಯಾದ ನೀರು ನಿಂತು ರೈತರಿಗೆ ತೊಂದರೆ ಆಗುತ್ತಿದೆ. ಈ ಹಿನ್ನಲೆಯಲ್ಲಿ ರೈತರು ಈ ವಿಷಯವನ್ನು ನನ್ನ ಗಮನಕ್ಕೆ ತಂದಾಗ ತ್ವರಿತವಾಗಿ ಅನುದಾನವನ್ನು ತಂದು ಕಾಮಗಾರಿಗೆ ಚಾಲನೆಯನ್ನು ನೀಡುತ್ತಿದ್ದೇವೆ‌.ಇವತ್ತು ಇಂಗಳಿ ಗ್ರಾಮದಲ್ಲಿ ಸುಮಾರು 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸವಳು ಜವಳು ನಿರ್ಮೂಲನಾ ಕಾಮಗಾರಿಗೆ ಚಾಲನೆಯನ್ನು ನೀಡಿದ್ದೇವೆ. ಈ ಯೋಜನೆ ಯಶಸ್ವಿಗೊಂಡು ರೈತರು ಉತ್ತಮವಾದ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸದೃಢವಾಗಲಿ ಎಂದು ಹಾರೈಸಿದರು. ಅದಲ್ಲದೆ ಇಂಗಳಿ ಗ್ರಾಮಕ್ಕೆ ರಸ್ತೆಗಳ ಅಭಿವೃದ್ಧಿಗೆ ಎರಡು ಕೋಟಿ ಅನುದಾನವನ್ನು ನೀಡಲಾಗುವುದು ಎಂದು ಭರವಸೆಯನ್ನು ನೀಡಿದರು.

ಗಣಪಾ ಧನವಡೆ,ಸಂಜು‌ ಕುಡಚೆ,ರಮೇಶ ಮುರ್ಚಟೆ,ಚಂದ್ರಕಾಂತ ಲಂಗೋಟೆ,ಡಾ! ಅಜೀತ ಚಿಗರೆ,ರಾಜಾರಾಮ ಮಾನೆ,ಮಹಾದೇವ ಭವಾನೆ,ಬಾಬು ಮಿರ್ಜೆ,ಶಿವಾಜಿ ಪವಾರ,ಹೂವನಾ ಚೌಗಲೆ,ಅಣ್ಣಾಸಾಹೇಬ ದೇಸಾಯಿ,ರಾಹುಲ ಉಪಾದ್ಯೆ,ಗಜಾನನ ಮಗದುಮ್ಮ, ಸಾಗರ ಓರಾದೆ,ರಾಮಾ ಐಹೊಳೆ,ಅಣ್ಣಾಸಾಹೇಬ ಸರಡೆ,ಸುಧಿರ ಮೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!