ಬೆಳಗಾವಿಯ ಲವ್‌ಡೇಲ್ ಸೆಂಟ್ರಲ್ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ತೋಟಗಿ ಬೆಳಗಾವಿಯ ಕ್ಯಾಂಪನಲ್ಲಿರುವ ಕಾಂಟೋನ್ಮೆಂಟ್ ಶಾಲೆಗೆ 20 ಲೀಟರ್ ಬಣ್ಣವನ್ನು ದಾನವಾಗಿ ನೀಡಿ ಮಾದರಿಯಾಗಿದ್ದಾಳೆ.

ಬೆಳಗಾವಿಯ ಕ್ಯಾಂಪನಲ್ಲಿರುವ ಕಾಂಟೋನ್ಮೆಂಟ್ ಶಾಲೆಗೆ ಬೆಳಗಾವಿಯ ಲವ್‌ಡೇಲ್ ಸೆಂಟ್ರಲ್ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ತೋಟಗಿ 20 ಲೀಟರ್ ಬಣ್ಣವನ್ನು ದಾನವಾಗಿ ನೀಡಿ ಮಾದರಿಯಾಗಿದ್ದಾಳೆ. ಇದು ಶಾಲೆಯ ಗೋಡೆಗಳ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ಉದಾತ್ತ ಕಾರ್ಯವನ್ನು ಅವರ ಪ್ರಾಂಶುಪಾಲರಾದ ಲಕ್ಷ್ಮಿ ಇಂಚಲ, ಶೀತಲ್ ಸಿ ಮತ್ತು ಅವರ ಕುಟುಂಬ ಸದಸ್ಯರು ಪ್ರೋತ್ಸಾಹಿಸಿದ್ದಾರೆ.