ಬಾಗಲಕೋಟೆ ಜಿಲ್ಲೆ ಜಮಖಂಡಿಯ ಕಾರಾಗ್ರಹದ ಖೈದಿಗಳನ್ನು ಹೊರಗಡೆ ಕೆಲಸಕ್ಕೆ ಹಚ್ಚಿದ್ದು ಮತ್ತು ಆ ಕೈದಿಗಳು ಬಿಂದಾಸ್ ಆಗಿ ಓಡಾಡಿದ್ದರ ಕುರಿತು ಇನ್ ನ್ಯೂಸ್ ವಾಹಿನಿ ಸುದ್ದಿ ಬಿತ್ತರಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಅಧಿಕಾರಿಗಳು ಕಾರಾಗ್ರಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅವರು ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಗಳಾಗಿ ಜೈಲಿನಲ್ಲಿ ಬಂಧಿಗಳಾಗಿದ್ದರು. ಇಂಥವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಜೈಲರ್ ಹಾಗೂ ಸಿಬ್ಬಂದಿಗಳು ಖಾಸಗಿ ಕೆಲಸಕ್ಕಾಗಿ ಹೊರಗಡೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ಇವರು ಎದುರಲ್ಲಿ ಆ ಕಾಯ್ದೆಗಳು ಬಿಂದಾಸ್ ಆಗಿ ಓಡಾಡಿದ್ದಾರೆ. ಜೈಲರ್ ವಿ.ಡಿ. ಕುಮಾರ್ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ಕುರಿತು ನಿಮ್ಮ ಇನ್ ನ್ಯೂಸ್ ವಿಸ್ತೃತ ವರದಿ ಬಿತ್ತರಿಸಿತ್ತು ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗ್ರಹದ ಅಧಿಕ್ಷಕ ಕೊಟ್ರೇಶ ಅವರು ಜಮಖಂಡಿ ಕಾರಾಗೃಹಕ್ಕೆ ಭೇಟಿ ನೀಡಿ ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸಿ ಸಿಬ್ಬಂದಿಗಳ ಮತ್ತು ಖೈದಿಗಳ ವಿಚಾರಣೆ ಮಾಡಿದ್ದಾರೆ. ಈ ಕುರಿತು ಅಧಿಕಾರಿಗಳು ಇನ್ನಷ್ಟು ಪರಿಶೀಲಿಸಿ ಮಾಹಿತಿ ನೀಡುವುದಾಗಿ ತಿಳಿಸಿದರು.
ಜಮಖಂಡಿಗೆ ಜೈಲಿಗೆ ಹಿರಿಯ ಅಧಿಕಾರಿಗಳ ಭೇಟಿ ಪರಿಶೀಲನೆ
ವಿಚಾರಣಾಧೀನ ಖೈದಿಗಳನ್ನ ಪೈಪ್ ಲೈನ್ ದುರಸ್ಥಿ ಕೆಲಸಕ್ಕೆ ಬಳಸಿಕೊಂಡ ನಿರ್ಲಕ್ಷ್ಯ ತೋರಿದ್ದ ಜೈಲು ಅಧಿಕಾರಿಗಳು
ಕೆಲಸಕ್ಕೆಂದು ಹೊರಗೆ ಬಂದು ರಾಜಾರೋಷವಾಗಿ ರಸ್ತೆಯಲ್ಲಿ ಓಡಾಡಿದ್ದ ಖೈದಿಗಳು..
ಜೈಲರ್ ವಿ. ಡಿ. ಕುಮಾರ್ ಹಾಗೂ ಸಿಬ್ಬಂದಿಯಿಂದ ನಿರ್ಲಕ್ಷ್ಯ..
ಇನ್ ನ್ಯೂಸ್ ವರದಿ ಬೆನ್ನಲ್ಲೆ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಅಧಿಕಾರಿ ಭೇಟಿ
ಸುಮಾರು ಮೂರು ಗಂಟೆಗಳ ಕಾಲ ಜಮಖಂಡಿ ಜೈಲಿನಲ್ಲಿ ಪರಿಶೀಲನೆ, ಖೈದಿಗಳ ವಿಚಾರಣೆ
ಜೈಲಿಗೆ ಭೇಟಿ ನೀಡಿದ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗ್ರಹ ಅಧೀಕ್ಷಕ ಕೊಟ್ರೇಶ್
ಖೈದಿಗಳು ಹೊರಗೆ ಬಂದಿದ್ದರ ಬಗ್ಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ವಿವವರಣೆ..
ಪೈಪ್ ಲೈನ್ ದುರಸ್ಥಿ ಮಾಡಿದ ಸ್ಥಳ ಪರಿಶೀಲನೆ, ಖೈದಿಗಳ ವಿಚಾರಣೆ..
ಹೊರಗೆ ಖಾಸಗಿ ಕಾರ್ಮಿಕರಿಂದ ಕೆಲಸ ಮಾಡಿಸುವ ಬದಲು ಖೈದಿಗಳ ಬಳಸಿದ್ದ ಅಧಿಕಾರಿಗಳು..
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಜೈಲಿನ ವಿಚಾರಣಾಧೀನ ಖೈದಿಗಳು….