Banglore

ಗ್ಯಾರಂಟಿ ಅನುಷ್ಠಾನಕ್ಕೆ ಶಾಸಕರ ಬದಲೂ ಕಾಂಗ್ರೆಸ್ ಕಾರ್ಯಕರ್ತರ ನೇಮಕ…

Share

ಇಂದು ವಿಧಾನಸಭಾ ಸದನದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯಗೆ ಕಾಂಗ್ರೆಸ್ ಸದಸ್ಯರನ್ನೇ ಆಯ್ಕೆ ಮಾಡುತ್ತಿರುವ ಬಗ್ಗೆ ಆಡಳಿತ ಮತ್ತು ವಿರೋಧಿ ಪಕ್ಷದ ಸದಸ್ಯರಲ್ಲಿ ತೀವ್ರವಾದ ಚರ್ಚೆ ನಡೆಯಿತು. ಸದ್ದು ಗದ್ದಲದ ಹಿನ್ನೆಲೆ ಸಭಾಪತಿಗಳು ಸದನದ ಕಲಾಪವನ್ನು ಮೂಂದೂಡಿದರು.

ಇಂದು ವಿಧಾನಮಂಡಲದ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ಕೃಷ್ಣಪ್ಪ ಎಂ.ಟಿ. ಅವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು 40 ಸಾವಿರ ರೂಪಾಯಿ ಸಂಬಳ ನೀಡಿ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ರಾಜ್ಯ ಸರ್ಕಾರ ಬಹುಮೌಲ್ಯದ ಯೋಜನೆಗಳನ್ನು ಜಾರಿಗೊಳಿಸಲು, ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುವುದು ಸರಿಯೇ ಎಂದು ಪ್ರಶ್ನಿಸಿದರು.

ಆದರೇ, ಸಂಬಂಧಿಸಿದ ಸಚಿವರು ಉತ್ತರ ನೀಡುವಷ್ಟರಲ್ಲೇ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಆರಗ ಜ್ಞಾನೇಂದ್ರ ಇನ್ನುಳಿದವರು ಇದಕ್ಕೆ ಧ್ವನಿಗೂಡಿಸಿದರು. ಮೋದಿ ಅವರು ಕೂಡ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದಕ್ಕೆ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿದ್ದಾರೆಯೇ? ಜನರಿಂದ ಚುನಾಯಿತ ಸದಸ್ಯರ ಮೇಲೆ ಸರ್ಕಾರಕ್ಕೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು. ನಂತರ ಸದ್ದು ಗದ್ದಲವಾಗಿ ಕಾರ್ಯಕಲಾಪವನ್ನು ಸಭಾಪತಿಗಳು ಮುಂದೂಡಿದರು.

ನಂತರ ಕಲಾಪ ಮತ್ತೇ ಆರಂಭಗೊಂಡಿತು. ಉತ್ತರ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ಸಚಿವರಾದ ಪ್ರಿಯಾಂಕ್ ಖರ್ಗೆ ಮುಂದಾದರೂ ಆದರೇ, ಬಿಜೆಪಿ ಸದಸ್ಯರು ನಮ್ಮದು ಗ್ಯಾರಂಟಿ ಯೋಜನೆಗಳಿಗೆ ವಿರೋಧವಿಲ್ಲ. ಕೇವಲ ಕಾಂಗ್ರೆಸ್ ಸದಸ್ಯರನ್ನು ನೇಮಿಸಿದ ಬಗ್ಗೆ ವಿರೋಧವಿದೆ ಎಂದು ಹೇಳುತ್ತಿದ್ದಂತೆ ಮತ್ತೆ ಸದ್ದು ಗದ್ದಲ ಉಂಟಾಯಿತು ಸಭಾಪತಿಗಳು ಸದನದ ಕಲಾಪವನ್ನು ಮುಂದೂಡಿದರು.

Tags:

error: Content is protected !!