Bagalkot

ಕುರಿಗಳ್ಳತನಕ್ಕೆ ವಿರೋಧ…ಕುರಿಗಾಹಿಯನ್ನು ಕೊಂದ ದುರುಳರು

Share

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ಕುರಿಗಳ್ಳತನಕ್ಕೆ ಬಂದು ಕುರಿಗಾಹಿಯನ್ನು ಕೊಲೆಗೈದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದಲ್ಲಿ ಶರಣಪ್ಪ ಜಮ್ಮನಕಟ್ಟಿ (23) ಎಂಬ ಕುರಿಗಾಹಿಯನ್ನು ಕುರಿಗಳ್ಳತನಕ್ಕೆ ಬಂದು ಯಾಕೂಬ್ ಅಗಸಿಮನಿ, ಸಲ್ಮಾನ್ ಕರೆಮನ್ನೂರ ಮತ್ತು ಸಚಿನ್ ಭಜಂತ್ರಿ ಎಂಬುವವರು ಕೊಲೆ ಮಾಡಿದ್ದರು. ಮೃತ ಶರಣಪ್ಪನ ಸಹೋದರ ಭೀಮಶಿ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕೇರೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತ ಶರಣಪ್ಪನ ಕತ್ತಿಗೆ ಹೊಡೆದು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಬಾಗಲಕೋಟೆ ಎಸ್ ಪಿ ಅಮರನಾಥ್ ರೆಡ್ಡಿ ಮಾಹಿತಿಯನ್ನು ನೀಡಿದ್ದಾರೆ.
.

Tags:

error: Content is protected !!