ನೈಋತ್ಯ ರೇಲ್ವೆಯ ವತಿಯಿಂದ ಬೆಳಗಾವಿಯ ತಾನಾಜೀ ಗಲ್ಲಿಯ ರೇಲ್ವೆ ಗೇಟ್ ನಿನ್ನೆಯಿಂದ ಬಂದ್ ಮಾಡಲಾಗಿದ್ದು, ಈ ಮಾರ್ಗವಾಗಿ ಸಂಚರಿಸುವ ಜನರಲ್ಲಿ ಗೊಂದಲ ಉಂಟಾಗಿದೆ.

ಬೆಳಗಾವಿಯ ತಾನಾಜೀ ಗಲ್ಲಿಯ ರೇಲ್ವೆ ಗೇಟ್’ನ್ನು ಯಾವುದೇ ಅಪಘಾತಗಳು ನಡೆಯಬಾರದು. ಜನರ ಜೀವಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ನೈಋತ್ಯ ರೇಲ್ವೆ ಮಂಡಳವು ಬಂದ್ ಮಾಡಿದೆ. ಇದರಿಂದಾಗಿ ತಾನಾಜೀ ಗಲ್ಲಿ, ಭಾಂದೂರ ಗಲ್ಲಿ, ಫುಲ್’ಬಾಗ್ ಗಲ್ಲಿಯ ಸಂಪರ್ಕ ಕಳೆದು ಹೋಗಿದ್ದು, ಕಳೆದ ಹಲವು ದಿನಗಳ ಹಿಂದೆಯೇ ರೇಲ್ವೆ ಮಂಡಳವು ಗೇಟ್ ಬಂದ್ ಮಾಡುವ ಕುರಿತು ಸ್ಥಳದಲ್ಲಿ ಫಲಕವನ್ನು ಅಳವಡಿಸಿತ್ತು.
ಭರತೇಶ ಹೈಸ್ಕೂಲ್, ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆ ನಂ.7 , ಉಷಾತಾಯಿ ಗೋಗಟೆ ಶಾಲೆ ಇನ್ನುಳಿದ ಶಾಲೆಯ ಮಕ್ಕಳಿಗೂ ತೊಂದರೆಯಾಗಲಿದೆ. ಕಪಿಲೇಶ್ವರ ಮೇಲ್ಸೇತುವೆಯನ್ನು ಬಳಸಿ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಪಿಲೇಶ್ವರ ಮೇಲ್ಸೇತುವೆ ಮೇಲೆ ಪಾದಚಾರಿಗಳಿಗೆ ಫೂಟ್’ಪಾಥ್ ಇಲ್ಲದಿರುವುದು, ಪಾದಚಾರಿಗಳಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ.