Uncategorized

ನಶಿಸಿ ಹೊರಟ ಹಲಗೆ ಸಂಪ್ರದಾಯ: ಸಂಪ್ರದಾಯ ಉಳಿಸಲು ರಾಮನವಮಿ ಉತ್ಸವ ಸಮಿತಿಯಿಂದ ಹಲಗೆ ಸ್ಪರ್ಧೆ

Share

ಗಂಡು ಹೈಕ್ಳ ಹಬ್ಬ, ಹಲಗೆ ಶಬ್ದಕ್ಕೆ ಹೆಸರುವಾಸಿಯಾಗಿರುವ ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಪ್ರತಿಯೊಂದು ಹಳ್ಳಿ ನಗರಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಪ್ರತಿ ಓಣಿಗಳಲ್ಲಿ ಹಲಿಗೆಯ ಬಾರಿಸುವ ಸಾಂಪ್ರದಾಯ ನಡೆದುಕೊಂಡು ಬಂದಿದೆ.‌ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯವು ನಶಿಸಿ ಹೊರಟಿದೆ. ಇಂತಹ ಸಂಪ್ರದಾತ ನಶಿಸದಿರಲಿ ಎಂದು ಹಲಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಕುರಿತು ಇಲ್ಲಿದೆ ಡಿಟೇಲ್ಸ್..

ಹೌದು…ಗುಮ್ಮಟ ನಗರಿ ವಿಜಯಪುರದಲ್ಲಿ ಹೋಳಿ ಹುಣ್ಣಿಮೆ ನಿಮಿತ್ಯ ಮಾಜಿ ಕಾರ್ಪೋರೆಟರ್ ಉಮೇಶ ವಂದಾಲ ಅಧ್ಯಕ್ಷತೆಯ ಶ್ರೀ ರಾಮ ನವಮಿ ಉತ್ಸವ ಸಮಿತಿಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಲಿಗೆ ಸ್ಪರ್ಧೆಯನ್ನು ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಆಯೋಜಿಸಲಾಗಿತ್ತು. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಯುವ ಪೀಳಿಗೆಗೆ ಹಬ್ಬಗಳ ಬಗೆಗಿನ ಪ್ರೀತಿ ಮತ್ತು ಉತ್ಸಾಹ ಕಡಿಮೆಯಾಗದಿರಲೆಂದು ಮತ್ತು ನಮ್ಮ ಸಂಸ್ಕೃತಿ ಹಬ್ಬಗಳು ಉಳಿಯಬೇಕೆಂಬ ಸದುದ್ದೇಶದಿಂದ ಹಲಗಿ ಬಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.‌ ಸಾವಿರಾರು ಜನರು ಹಲಗೆ ಸ್ಪರ್ಧೆಯನ್ನು ಕಣ್ತುಂಬಿಕೊಂಡರು.‌ ಈ ಸ್ಪರ್ಧೆಯಲ್ಲಿ ವಿಜಯಪುರ, ಬಾಗಲಕೋಟ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 50 ಕ್ಕಿಂತ ಹೆಚ್ಚು ಸ್ಪರ್ಧಾಳುಗಳು ವ್ಯಯಕ್ತಿಕವಾಗಿ ಹಾಗೂ ಗುಂಪುಗಳಾಗಿ ಭಲು ಜೋರು ಉತ್ಸಾಹದಿಂದ ಹಲಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇನ್ನೂ ಹಲಗೆ ಸ್ಪರ್ಧೆ ವೀಕ್ಷಿಸಲು ಹೆಣ್ಣು ‌ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಅತ್ತ ವೇದಿಕೆಯ ಮೇಲೆ ಕಣ್ಣು ಕೊರೆಯುವ ಬೆಳಕಿನಲ್ಲಿ ಹಲಗೆ ಬಾರಿಸುತ್ತಿದ್ದರೆ ಇತ್ತ ಪ್ರೇಕ್ಷಕರು ಶಿಳ್ಖೆ, ಚಪ್ಪಾಳೆ ಮೂಲಕ ಹುರುದುಂಬಿಸುತ್ತಿದ್ದರು.‌ಇದೇ ವೇಳೆ ಭಾರತೀಯ ಸಂಪ್ರದಾಯ ನಶಿಸದಿರಲಿ ಎನ್ನುವ ಉದ್ದೇಶದಿಂದ ನೃತ್ಯ, ಹಾಗೂ ಯೋಗ ಪ್ರದರ್ಶನ ಕೂಡಾ ನಡೆಯಿತು. ಈ ಸ್ಪರ್ಧೆಯಲ್ಲಿ ತಂಡಕ್ಕೆ ಪ್ರಥಮ ಬಹುಮಾನ ರೂ. 25,000, ದ್ವಿತೀಯ ಬಹುಮಾನ 15,000 ರೂ. ತೃತೀಯ ಬಹುಮಾನ ರೂ. 10,000 ವಿತರಿಸಲಾಯಿತು. ವೈಯಕ್ತಿಕವಾಗಿ ಭಾಗವಹಿಸು ವವರಿಗೆ ಪ್ರಥಮ ಬಹುಮಾನ ರೂ. 11,000, ದ್ವಿತೀಯ ಸ್ಥಾನ ರೂ.7500, ಹಾಗೂ ತೃತೀಯ ಸ್ಥಾನಕ್ಕೆ 5000 ರೂ. ಬಹುಮಾನ ವಿತರಿಸಲಾಯಿತು. ಇನ್ನೂ ಸ್ಪರ್ಧಾಳುಗಳು ತಮ್ಮ ಹಲಿಗೆಯನ್ನು ತಾವೇ ತೆಗೆದುಕೊಂಡು ಬಂದು ಭಾಗವಹಿಸಿದ್ದು ವಿಶೇಷವಾಗಿತ್ತು.

ಒಟ್ನಲ್ಲಿ ಗುಮ್ಮಟನಗರಿಯಲ್ಲಿ ಹಲಗೆ ಶಬ್ದ ಝೇಂಕರಿಸಿತು. ಆಧುನಿಕ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ನಮ್ಮ ದೇಶದ ಸ‌ಂಪ್ರದಾಯ ಉಳಿಸಲು ಇಂತಹ ಸ್ಪರ್ಧೆಗಳು ಅವಶ್ಯಕವಾಗಿವೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!