ಹುಬ್ಬಳ್ಳಿ ಧಾರವಾಡ ಅವಳಿನಗರದ ಜನತೆಗೆ ತ್ವರಿತ ಸಂಚಾರ ಸೇವೆ ನೀಡುವ ಉದ್ದೇಶದಿಂದ ಆರಂವಾಗಿರೋ ಬಿಆರ್ಟಿಎಸ್ ಯೋಜನೆಯ ಸಂಚಾರ ಸೇವೆಯು, ತ್ವರಿತ ಸಂಚಾರ ಸೇವೆಯಲ್ಲಿ ಸುದ್ದಿಯಾಗುವುದರ ಬದಲು ಅವಾಂತರಗಳಿಂದಲ್ಲೇ ಹೆಚ್ಚು ಸುದ್ದಿಯಾಗುತ್ತಾ ಬಂದಿದೆ. ಈಗ ಮತ್ತೊಂದು ಅವಾಂತರದಿಂದ ಬಿಆರ್ಟಿಎಸ್ ಸುದ್ದಿಯಲ್ಲಿದೆ. ಧಾರವಾಡದಲ್ಲಿ ಬಿಆರಟಿಎಸ್ ಮಾರ್ಗದ ರಸ್ತೆ ಡಿವೈಡರ್ ಗ್ರೀಲ್ ಮುರಿದು ಬಿದ್ದರು ಅದನ್ನು ತೆರವು ಮಾಡದೆ ನಿರ್ಲಕ್ಷ್ಯವಹಿಸಿದ್ದು, ಕೊನೆಗೆ ವಾಹನ ಸವಾರ ಪರದಾಟ ನೋಡಲಾಗದೆ ಸಂಚಾರಿ ಪೊಲೀಸರು ಈಗ ಅವುಗಳನ್ನು ಎತ್ತಿಟ್ಟು ಮುಂದಾಗುತ್ತಿದ್ದ ಅನಾಹುತ ತಪ್ಪಿಸಿದ್ದಾರೆ.

ಹೌದು ಧಾರವಾಡ ಟೋಲ್ ನಾಕಾ ಹಾಗೂ ಬಾಗಲಕೋಟ ಪೆಟ್ರೋಲ್ ಪಂಪ ಬಳಿಯಲ್ಲಿ ಇತ್ತೀಚೆಗೆ ವಾಹನಗಳು ಬಿಆರ್ಟಿಎಸ್ ರಸ್ತೆ ಡಿವೈಡರ್ ಗ್ರೀಲ್ಗೆ ಡಿಕ್ಕಿಯಾಗಿ ಗ್ರೀಲ್ಗಳು ಮುರಿದು ಬಿದದ್ದವು. ಆದರೆ ಕಳೆದ ಒಂದು ತಿಂಗಳಿಂದ ಗ್ರೀಲ್ಗಳನ್ನು ತೆರವು ಮಾಡದೇ HDBRTSನ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಾ ಬಂದಿದೆ. ಇದರಿಂದಾಗಿ ಅವಳಿನಗರ ಮಧ್ಯ ಸಂಚರಿಸುವ ವಾಹನ ಸವಾರರಿಗೂ ತೊಂದರೆ ಉಂಟಾಗುತಿತ್ತು.
ಜತೆಗೆ ಅಪಘಾತಕ್ಕೂ ಕೂಡಾ ಈ ಮುರಿದು ಬಿದ್ದ ಗ್ರೀಲ್ಗಳು ಎದುರು ನೋಡುತ್ತಿದ್ದವು. ಇದನ್ನು ಅರಿತುಕೊಂಡ ಧಾರವಾಡ ಸಂಚಾರಿ ಠಾಣೆಯ ಸಿಬ್ಬಂದಿಗಳಾದ ಹುಲಿಗೆಪ್ಪ, ಅತ್ತಾರ ಸಂಜೀವ ಹಾಗೂ ಹೋಂ ಗಾರ್ಡ ಜಿಲಾನಿ ಖಾಜಿ ಗ್ರೀಲ್ಗಳನ್ನು ಎತ್ತಿಟ್ಟು ವಾಹನ ಸವಾರರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಿ ಸಮಾಜಿಕ ಜವಾಬ್ದಾರಿ ತೋರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸಂಚಾರಿ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ವಾಹನ ಸವಾರರ ಮೆಚ್ಚಿಕೊಂಡಿದ್ದಾರೆ.