ಮಹಿಳೆಯರು ಇಂದಿನ ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪುರುಷ ಸಮಾನ ವೃತಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಮಹಿಳೆಯರು ಕೂಡಾ ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಕುರುಬಗಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರತ್ನಾ ಕರೆ ನೀಡಿದರು.

ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮ ಪಂಚಾಯತಿ ಸಭಾ ಭವನದ ಶಿಸುವಿಹಾರ ಭವನದಲ್ಲಿ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ 6 kg ಕೇಕ್ ಕತ್ತರಿಸಿ ಶುಭಾಶಯ ಕೋರಿದ ಬಳಿಕ ಮಾತನಾಡಿದ ಅವರು, ನಮ್ಮ ಗ್ರಾಮೀಣ ಭಾಗದ ಮಹಿಳೆಯರು ಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ತಮ್ಮ ಮಕ್ಕಳ ಜೆತೆಗೆ ತಾವು ಶಿಕ್ಷಣವಂತರಾದ್ದರೆ, ಮಕ್ಕಳು ದಾರಿ ತಪ್ಪುವುದನ್ನು ತಪ್ಪಿಸಲು ತಿಳಿಯುತ್ತದೆ. ಇದರಿಂದ ಮಕ್ಕಳನ್ನು ಸರಿ ದಾರಿಗೆ ತರಲು ಸಹಕಾರಿಯಾಗುತ್ತದೆ. ನಮ್ಮ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ವಾಹನವನ್ನು ಮಹಿಳೆಯ ಚಾಲನೆ ಮಾಡುತ್ತಿದ್ದಾರೆ.
ಇದೂ ನಮ್ಮಗೆ ಹೆಮ್ಮೆಯ ವಿಷಯವಾಗಿದೆ. ಹೀಗೆ ಎಲ್ಲರು ಶಿಕ್ಷಣ ಸೇರಿ ಸಾಮನ್ಯ ಜ್ಞಾನ ಕಡೆ ಹೆಚ್ಚು ಒತ್ತು ನೀಡಬೇಕು. ಸರ್ಕಾರಗಳು ಮಹಿಳಾ ಸ್ವಾವಲಂಬಿ ಬದುಕಿಗಾಗಿ ಸಾಕಷ್ಟು ಯೋಜನೆಗಳ ತಂದಿವೆ. ಅವುಗಳ ಬಗ್ಗೆ ತಿಳಿದುಕೊಂಡು ಅದರ ಉಪಯೋಗ ಪಡೆದುಕೊಳ್ಳಬೇಕು. ಒಂದು ವೇಳೆ ಯೋಜನೆಗಳ ಕುರಿತು ಮಾಹಿತಿ ಬೇಕಾದಲ್ಲಿ ಪಂಚಾಯತಿ ಸಂಪರ್ಕ ಮಾಡಿ ಎಂದು ಕರೆ ನೀಡಿದರು. ಜತೆಗೆ ಇಂದಿನ ಆಧುನಿಕ ಯುಗದ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿ, ಸಾಲಗಳ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ಇರಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗುಹ ಪಂಚಾಯತಿ ಸಿಬ್ಬಂದಿಗಳು ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.