ಶಾಲಾ ಮಕ್ಕಳ ದಿನ ಬಳಕೆಗಾಗಿ ನಿರ್ಮಿಸಲಾದ ನೀರಿನ ಟ್ಯಾಂಕ್ ಧಿಡಿರ್ ಸ್ಫೋಟ ಗೊಂಡಿದ್ದು ಶಾಲಾ ಮಕ್ಕಳು ಭಾರಿ ಅನಾಹುತದಿಂದ ಜಸ್ಟ್ ಪಾರಾಗಿದ್ದಾರೆ.

ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದ ಸರ್ಕಾರಿ ಕನ್ನಡ ಹಾಗೂ ಮರಾಠಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಎಲ್ ಐ ಸಿ ಸಂಸ್ಥೆಯ ಸಹಾಯಧನದಿಂದ ನಿರ್ಮಿಸಲಾದ ನೀರಿನ ಘಟಕ ಇದ್ದಕ್ಕಿದ್ದ ಹಾಗೆ ಸ್ಫೋಟ ಗೊಂಡಿದೆ. ಗೋಡೆಯ ಸ್ಫೋಟದ ರಭಸಕ್ಕೆ ಶಾಲಾ ತಡೆಗೋಡೆ ಕುಸಿದು ಬಿದ್ದಿದೆ.
ಬೆಳಿಗ್ಗೆ 11:30 ನೀ ಕ್ಕೆ ಈ ಘಟನೆ ನಡೆದಿದ್ದು ನೀರಿನ ಟ್ಯಾಂಕ್ ಬಳಿ ವಿದ್ಯಾರ್ಥಿಗಳು ಇಲ್ಲದ ಕಾರಣ ಯಾವುದೆ ಅವಘಡ ಸಂಭವಿಸಿಲ್ಲ ಗುತ್ತಿಗೆದಾರನ ನಿರ್ಲಕ್ಷದಿಂದ ಈ ಅವಘಡ ಸಂಭವಿಸಿರುವ ಆರೋಪ ಕೇಳಿ ಬಂದಿದೆ.ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.