Belagavi

ವಿಶೇಷ ಚೇತನ ಮಗುವಿನ ಬಾಳಿನಲ್ಲಿ ಬೆಳಕಾದ ಇಟಲಿಯ ದಂಪತಿ…

Share

ಮಕ್ಕಳಿಲ್ಲದವರು ದತ್ತು ಮಗುವನ್ನು ಪಡೆಯುವುದು ಸಹಜ. ಆದರೇ, ಇಟಲಿಯ ಸಂತಾನಹೀನ ದಂಪತಿಯೊಬ್ಬರೂ, ವಿಶೇಷ ಚೇತನ ಮಗುವನ್ನು ದತ್ತು ಪಡೆದು ಮಾದರಿಯಾಗಿದ್ದಾರೆ. ವಿಶೇಷ ಚೇತನ ಮಗುವಿನ ಬಾಳಿನಲ್ಲಿ ಬೆಳಕಾದ ದಂಪತಿಗಳು ಯಾರು? ಎಂದು ತಿಳಿಯಬೇಕಾದರೇ ಈ ವರದಿಯನ್ನು ನೋಡಿ.

ಪತಿಗೆ ನಡೆದಾಡದ ಸ್ಥಿತಿ. ಆತನ ಪತ್ನಿ ಫಿಜಿಯೋ ಥೆರಪಿಸ್ಟ್. ಸರ್ಕಾರಿ ಹುದ್ದೆಯಲ್ಲಿದ್ದರೂ, ಮದುವೆಯಾಗಿ 7-9 ವರ್ಷಗಳು ಕಳೆದರೂ ಕೂಡ ಆ ದಂಪತಿಗಳಿಗೆ ಸಂತಾನ ಭಾಗ್ಯವಿರಲಿಲ್ಲ. ಆದ್ದರಿಂದ ಅಂತರಾಷ್ಟ್ರೀಯ ದತ್ತು ಪ್ರಕ್ರಿಯೆ ಮುಂದಾಗಿ ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ದತ್ತು ಕೇಂದ್ರವನ್ನು ಇಟಲಿಯಿಂದ ಸಂಪರ್ಕಿಸಿ, ವಿಶೇಷಚೇತನ ಮಗುವನ್ನು ಅವರು ಕಾನೂನಾತ್ಮಕವಾಗಿ ದತ್ತು ಪಡೆದು, ಮಾದರಿಯಾಗಿದ್ದಾರೆ. ನಮ್ಮ ಮಗು ಹಾಗಿರಬೇಕು, ಹೀಗಿರಬೇಕು. ಹೀಗೆಯೇ ಕಾಣಬೇಕು ಎಂದೆಲ್ಲ ತಂದೆ ತಾಯಿ ಯೋಚಿಸುತ್ತಾರೆ.

ಆದರೇ ಇಟಲಿಯ ಫ್ಲೋರೆನ್ಸನ ಕೋಸ್ಟಾಂಜಾ ಮತ್ತು ಬುಜರ್ ಡೆಡೆ ದಂಪತಿಗಳು ಭಾರತದ ವಿಶೇಷಚೇತನ ಮಗುವಿನ ಬಾಳಿನಲ್ಲಿ ಬೆಳಕಾಗಿದ್ದಾರೆ. ಭಾರತ ಸರ್ಕಾರದ ಪ್ರಕಾರ ಕಾನೂನಾತ್ಮಕವಾಗಿ ದತ್ತು ಪ್ರಕ್ರಿಯೆ ನಡೆಸಲಾಗಿದೆ. ಭಾರತದ ಜನರು ಬೇರೆ ದೇಶದವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಈ ವಿಶೇಷ ಚೇತನ ಮಗುವಿನ ಉತ್ತಮ ಆರೈಕೆ ಮತ್ತು ಒಳ್ಳೆಯ ಭವಿಷ್ಯವನ್ನು ರೂಪಿಸಲಾಗುವುದು ಎನ್ನುತ್ತಾರೆ ಕೋಸ್ಟಾಂಜಾ ಮತ್ತು ಬುಜರ್ ಡೆಡೆ ದಂಪತಿಗಳು.

ದತ್ತು ಮಗುವನ್ನು ಪಡೆಯುವಾಗ ಉತ್ತಮ ರೀತಿಯಲ್ಲಿರುವ ಮಗುವನ್ನು ದತ್ತು ಪಡೆದರೇ, ಭವಿಷ್ಯ ಒಳ್ಳೆಯದಾಗುತ್ತದೆಂದು ಯೋಚಿಸುತ್ತಾರೆ. ಆದರೇ ಇಟಲಿಯ ಈ ದಂಪತಿ ವಿಶೇಷ ಚೇತನ ಮಗುವಿನ ಜೀವನದಲ್ಲಿ ಬೆಳಕಾಗಿದ್ದಾರೆ. 2015 ರಲ್ಲಿ ಇವರು ಮದುವೆಯಾಗಿದ್ದು, ಸಂತಾನವಿಲ್ಲದೇ ಪರಿತಪಿಸುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಫಿಜಿಯೋ ಥೆರಪಿಯಾಗಿ ಕೋಸ್ಟಾಂಜಾ ಕಾರ್ಯನಿರ್ವಹಿಸುತ್ತಾಳೆ. ಈಗ ವಿಶೇಷ ಚೇತನ ಮಗುವನ್ನು ದತ್ತು ಪಡೆದು ಮಾದರಿಯಾಗಿದ್ದಾರೆ ಎಂದರು.

ಇನ್ನು ದತ್ತು ಪ್ರಕ್ರಿಯೆಗೆ ಭಾರತ ಮತ್ತು ಇಟಲಿಯ ಸಂಪರ್ಕದ ಕೊಂಡಿಯಾದ ಹಸಮುಖ ಠಕ್ಕರ್ ಅವರು ಇಟಲಿಯ ಈ ದಂಪತಿಗಳು ಭಾರತದ ಮಗುವನ್ನು ದತ್ತು ಪಡೆದು ಅತ್ಯಂತ ಚೆನ್ನಾಗಿ ಪೋಷಣೆ ಮಾಡುತ್ತಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರತಿ 2 ತಿಂಗಳಿಗೊಮ್ಮೆ ಮಗುವಿಗೆ ಸಂಬಂಧಿಸಿದಂತಹ ವರದಿಯನ್ನು ಅವರು ನೀಡಲಿದ್ದಾರೆ. ಕಾನೂನಾತ್ಮಕವಾಗಿ ದಾಖಲೆಗಳ ಮೂಲಕ ದತ್ತು ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದರು.

 

Tags:

error: Content is protected !!