ಆದಿಶಕ್ತಿ ಮಾಯಕ್ಕ ದೇವಿಯ ಜಾತ್ರೆ ಶೇಡಬಾಳದಲ್ಲಿ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ರವಿವಾರ ರಂದು ಶೇಡಬಾಳದ ಮಾಯಕ್ಕನ ಮುಖ್ಯ ವಾಸ್ತವ್ಯದ ಪೂಣ್ಯ ಸ್ಥಾನದಲ್ಲಿ ದೇವಿಯ ಜಾತ್ರೆ ಆಚರಿಸಲಾಯಿತು.
ಹಳೆಯ ಇತಿಹಾಸದಲ್ಲಿ ಮಾಯಕ್ಕ ದೇವಿ ಚಿಂಚಲಿ ಗ್ರಾಮಕ್ಕೆ ಸಾಗುವ ಪೂರ್ವದಲ್ಲಿ ಶೇಡಬಾಳದ ಮಾಯವನ ಕೆರೆ ಹತ್ತಿರ ತಮ್ಮ ವಾಸ್ತವ್ಯ ಮಾಡಿದರು ಎಂದು ಇತಿಹಾಸದಲ್ಲಿದೆ. ಇಲ್ಲಿಗೆ ಅನೇಕ ವರ್ಷಗಳಿಂದ ಮಾಯಕ್ಕ ದೇವಿ ಜಾತ್ರೆ ಆಚರಿಸುತ್ತಾರೆ. ಇಲ್ಲಿಗೆ ಮಂದಿರ ನಿರ್ಮಿಸಿ ದಿವ್ಯ ದರ್ಶನ ಪಡೆಯಲು ಸಾವಿರಾರು ಭಕ್ತರು ಈಗಲೂ ಆಗಮಿಸುತ್ತಾರೆ.

ಮಾಯಕ್ಕ ದೇವಿಯ ಮಂದಿರದ ಆರ್ಚಕ ಶ್ರೀಕಾಂತ ಕೋಳಿ ಇವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಆಚರಿಸಲಾಗಿತ್ತು. ಶೇಡಬಾಳದ ಶ್ರೀ ಬೀರೇಶ್ವರ ಮಂದಿರದ ಪಲ್ಲಕ್ಕಿ ವಾಲಗ ದೊಂದಿಗೆ ಆರ್ಚಕರು ಭಕ್ತರು ಆಗಮಿಸಿ ಮಾಯಕ್ಕ ದೇವಿಯ ಮಹಿಳಾ ಭಕ್ತರು ಜಲಕುಂಬಾ ತೆಗೆದುಕೊಂಡು ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಾಲಗ, ಢೊಳ್ಳಿನ ವಾದ್ಯದೊಂದಿಗೆ ಸಾವಿರಾರು ಭಕ್ತರು ಪಾಲ್ಗೊಂಡು ದೇವಿಗೆ ಪೂಜೆ ಅರ್ಚನೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಣೆ ಮಾಡಿದರು.
ವಿಶೇಷವೆಂದರೆ ಶೇಡಬಾಳದ ಗೌಡರ ಮನೆತನರೊಂದಿಗೆ ಎಲ್ಲ ಸಮಾಜದವರು ಒಂದುಗೂಡಿ ಯಾವುದೇ ಜಾತಿಯತೆ ಅನ್ನದೇ ಮಾಯಕ್ಕದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಎಲ್ಲರೂ ಒಂದಗೂಡಿ ಪ್ರಸಾದ ಸೇವಿಸಿದರು.
ಬೀರೇಶ್ವರ ಮಂದಿರದ ಪೂಜಾರಿಗಳಾದ ಮಹದೇವ ಕಟ್ಟಿಕರ, ಸುರೇಶ್ ಪೂಜಾರಿ, ಹೊನ್ನಪ್ಪ ಗಾವಡೆ, ಇವರು ದೇವಿಯ ಪಲ್ಲಕ್ಕಿ ಪೂಜೆ ಸಲ್ಲಿಸಿ, ವಾಲಗ ಭಕ್ತಿ ಮಾಡುವಾಗ ಈ ವರ್ಷದ ಮುಂಗಾರು ಮಳೆ ಉತ್ತಮವಾಗಿದ್ದು, ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಭವಿಷ್ಯ ನುಡಿದರು.
ಮಾಯಕ್ಕ ದೇವಿ ಮಂದಿರದ ಅರ್ಚಕ ಶ್ರೀಕಾಂತ ಕೋಳಿ ಹಾಗೂ ರಾಜು ನಾಯಿಕ ಮಾತನಾಡಿ, ಶೇಡಬಾಳದ ಮಾಯಕ್ಕ ಕೆರೆ ಹತ್ತಿರ ಹಳೆಯ ಮಂದಿರವಿದ್ದು ಇಲ್ಲಿಗೆ ಪ್ರತಿ ವರ್ಷ ನಿರಂತರ ಮಾಯಕ್ಕನ ಜಾತ್ರೆ ಆಚರಿಸುತ್ತಿದ್ದೇವೆ. ಇದರಿಂದ ಇಲ್ಲಿಯ ಸದ್ಭಕ್ತರಿಗೆ ಒಳ್ಳೆಯ ಅನುಕೂಲವಾಗಿದೆ ಅನೇಕ ಹಿರಿಯರು ದೇವಿಗೆ ಪೂಜೆ ಸಲ್ಲಿಸಿ ತಮ್ಮ ಹರಕೆ ತೀರಿಸಿಕೊಳ್ಳುತ್ತಿದ್ದಾರೆ. ಎಂದು ಹೇಳಿದರು.
ಬೀರೇಶ್ವರ ಮಂದಿರದ ಹೊನ್ನಪ್ಪ ಗಾವಡೆ ಮಾತನಾಡಿ, ನಮ್ಮ ಮಂದಿರದ ಅರ್ಚಕರು ದೇವಿಗೆ ಪೂಜೆ ಸಲ್ಲಿಸಿ ಭಕ್ತಿಯಿಂದ ಬೇಡಿಕೊಂಡಾಗ, ಈ ವರ್ಷದ ಮುಂಗಾರು ಮಳೆ ಸಮರ್ಪಕವಾಗಿ ವಾಗಲಿದೆ. ಅಲ್ಲದೆ ರೈತರ ಬೆಳೆ ದನ-ಕರುಗಳಿಗೆ ಒಳ್ಳೆಯ ಸುಖ ಸಮೃದ್ಧಿ ಇದೆ ಎಂದು ನುಡಿ ನುಡದಿದ್ದ ಬಗ್ಗೆ ಎಲ್ಲಾ ಭಕ್ತರಿಗೆ ಹೇಳಿಕೊಂಡರು.
ಜಾತ್ರೆ ಯಶಸ್ವಿಗೊಳಿಸಲು ಇಲ್ಲಿಯ ಮಾಯಕ್ಕದೇವಿ ಪ್ರಸನ್ನ ಯುವಕ ಮಂಡಳದ ಎಲ್ಲ ಸದಸ್ಯರು ಒಂದು ಗುಡಿ ಭಕ್ತಿಯಿಂದ ದೇವಿಗೆ ನಮನ ಸಲ್ಲಿಸಿ, ಜಾತ್ರೆ ಯಶಸ್ವಿಗೊಳಿಸಲು ಸಹಕರಿಸಿದರು. ಇದೇ ರೀತಿ ಅನೇಕ ಮಹಿಳಾಭಕ್ತರು ದೇವಿಗೆ ನಮನ ಸಲ್ಲಿಸಿ ತಮ್ಮ ಆಸೆ ಹರಿಕೆಗಳನ್ನು ತಿರಿಸಿಕೊಂಡರು. ಶೇಡಬಾಳದ ಮಾಯಕ್ಕ ದೇವಿ ಜಾತ್ರೆ ಒಂದು ರೀತಿ ವಿಶೇಷತೆ ಎದ್ದು ಕಾಣುತ್ತಿದೆ.