ಕಾಗವಾಡ ಪಿಕೆಪಿಎಸ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹಿಂದಿನ ಆಡಳಿತ ಗುಂಪಿನ ಜ್ಯೋತಿ ಕುಮಾರ ಹಾಗೂ ಕಾಕಾ ಪಾಟೀಲರ ಗುಂಪಿಗೆ 12ರ ಪೈಕಿ 11 ಅಭ್ಯರ್ಥಿಗಳು ಭಾರಿ ಅಂತರದ ಮತಗಳಿಂದ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದರು.

ರವಿವಾರ ಮಧ್ಯಾಹ್ನ ಚುನಾವಣಾ ಅಧಿಕಾರಿ ಆರ ಎಸ. ನುಲಿ ಇವರ ನೇತೃತ್ವದಲ್ಲಿ ಮತ ಎಣಿಕೆ ಪ್ರಕ್ರಿಯೆ ಜರಗಿತು ಇದರಲ್ಲಿ ಹಿಂದಿನ ಆಡಳಿತ ಪಕ್ಷದ ಅಧ್ಯಕ್ಷ ಜ್ಯೋತಿ ಕುಮಾರ ಪಾಟೀಲ ಇವರು ಗುಂಪಿನ 11 ಜನ ಸದಸ್ಯರು ಜಯಭೇರಿ ಸಾಧಿಸಿದರು.
ಚುನಾಯಿತ ಗುಂಪಿನ ಸದಸ್ಯರ ಪೈಕಿ ಸ್ವಪ್ನಿಲ ರಾಜ ಗೌಡ ಪಾಟೀಲ, ಪದ್ಮಾಕರ ತಾತ್ಯಾಸಾಬ ಕರವ, ಶಾಂತಿನಾಥ ಸುಭಾಷ ಮಾಲಗಾವೆ, ಬಸಗೌಡ ಅಪ್ಪನಗೌಡ ಪಾಟೀಲ, ರಾವಸಾಬ ರಾಮು ಚೊಗಲಾ, ಶ್ರೀಮತಿ ಸುವರ್ಣ ಜೋತಗೌಡ ಪಾಟೀಲ, ಶ್ರೀಮತಿ ರೂಪಾಲಿ ರಮೇಶ ಪವಾರ, ಖಾಜಾಸಾಬ ಮಹಮ್ಮದ ಮುಲ್ಲಾ, ಅಪ್ಪಸಾಹೇಬ ಕಿರಣ ಗುಮಟೆ, ಅನಿಲ ರಾವ ಸಾಬ ಭಜಂತ್ರಿ, ಲಕ್ಕಪ್ಪಾ ಕಲ್ಲಪ್ಪಾ ಕೋಳಿ, ಶ್ರೀಮತಿ ಭಾರತಿ ಸುರೇಶ ತುಬುಲಾ, ಇವರು ಚುನಾಯಿತಗೊಂಡಿದ್ದಾರೆ ಎಂದು ಘೋಷಣಾ ಅಧಿಕಾರಿ ಘೋಷಣೆ ಮಾಡಿದರು.
ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಜ್ಯೋತಿ ಕುಮಾರ ಪಾಟೀಲ ಮಾತನಾಡುವಾಗ ಕಳೆದ ಅನೇಕ ವರ್ಷಗಳಿಂದ ಗ್ರಾಮದಲ್ಲಿ ಹಾಗೂ ಸಂಸ್ಥೆಯ ಸದಸ್ಯರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಷ್ಟ ಸುಖಗಳಲ್ಲಿ ನಾವು ಭಾಗಿಯಾಗಿ ಅಲ್ಲದೆ ಸಂಸ್ಥೆಯ ಒಟ್ಟಾರೆ ಅಭಿವೃದ್ಧಿಗಾಗಿ ಶ್ರಮಿಸಿದ ರಿಂದ ಮತ್ತೆ ಮತದಾರ ಬಂಧುಗಳು ನಮಗೆ ಆಶೀರ್ವಾದ ಮಾಡಿದ್ದಾರೆ ಇನ್ಮುಂದೆವು ನಾವು ಅವರ ನೀಡಿದ ಆಶೀರ್ವಾದ ಸಂಸ್ಥೆ ಅಭಿವೃದ್ಧಿಗಾಗಿ ಬಳಿಸುತ್ತೇವೆ ಎಂದು ಹೇಳಿದರು.
ಪಾಟೀಲ ಗುಂಪಿನ ಮುಖಂಡರಾದ ನ್ಯಾಯವಾದಿ ಕಾಕಾ ಪಾಟೀಲ ಮಾತನಾಡಿ ಚುನಾವಣೆಯಲ್ಲಿ ನಮ್ಮ ವಿರೋಧಿ ಗುಂಪುಗಳು ನಮ್ಮ ಬಗ್ಗೆ ಅಲ್ಲ ಸಲ್ಲದೆ ಹೇಳಿದೆ ಹೇಳಿಕೆಯನ್ನು ಇಲ್ಲಿಯ ಮತದಾರ ಬಾಂಧವರು ಒಟ್ಟಾರೆ ತಿಳಿದುಕೊಂಡು ನಮ್ಮ ಗುಂಪಿಗೆ ಆಶೀರ್ವಾದ ಮಾಡಿದ್ದಾರೆ ಅಷ್ಟೇ ಅಲ್ಲದೆ ಈ ಚುನಾವಣೆ ಸತ್ಯಮೇವ ಜಯತೆ ಸತ್ಯದಲ್ಲಿ ಅಳವಡಿಸಿದೆ ಎಂದು ಹೇಳಿದರು,
ಚುನಾವಣೆ ಫಲಿತಾಂಶ ಬಳಿಕ 2 ಗುಂಪುಗಳಿಂದ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಸಹಾಯಕ ಚುನಾವಣಾ ಅಧಿಕಾರಿ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ರಾಜೇಂದ್ರ ಪೂಜಾರಿ ಇವರು ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು.