ತಾಯಿ ಬೇಕು, ಸಹೋದರಿ ಬೇಕು, ಹೆಂಡತಿ ಬೇಕು ಆದರೆ ಹೆಣ್ಣು ಮಕ್ಕಳು ಯಾಕೆ ಬೇಡಾ? ಎಂಬ ಪ್ರಶ್ನೆ ವಿಚಾರಿಸುವ ಮೂಲಕ ಸ್ತ್ರೀ ಭ್ರೂಣ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ಸಂದೇಶ ಸಾರುವ ಬ್ಯಾನರ್ ಒಂದು ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿನ ಶ್ರೀ ಲಕ್ಷ್ಮೀ ದೇವಿ ಜಾತ್ರೆಯಲ್ಲಿ ಹಾಕಲಾಗಿದೆ ಜಾತ್ರೆಗೆ ಬಂದ ಭಕ್ತಾಧಿಗಳು ಇದರ ಬಗ್ಗೆ ವ್ಹಾ ಎಂತಹಾ ಜಾಗೃತಿಯ ಸಂದೇಶ ಸಾರುವ ಈ ಬ್ಯಾನರ್ ಎಂದು ಚರ್ಚೆ ಸುತ್ತ ಸಾಗುವ ನೋಟ ಕಾಣುತ್ತದೆ.

ಖಾನಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಬಾರ್ ಅಸೋಸಿಯೇಶನ್ ಅಧ್ಯಕ್ಷ ಅಧ್ಯಕ್ಷ ನ್ಯಾಯವಾದಿ ಈಶ್ವರ್ ಘಾಡಿ ಅವರು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸ್ವಾಗತ ಕೋರುವ ಈ ಬ್ಯಾನರ್ ಎಲ್ಲರ ಗಮನ ಸೆಳೆಯುತ್ತಾ ಇದೆ ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಿ ಎಂಬ ಸಂದೇಶದ ಬ್ಯಾನರ್ ನಲ್ಲಿ ರಾಜಮಾತಾ ಜಿಜಾವು, ಸಾವಿತ್ರಿ ಬಾಯಿ ಫುಲೆ, ಮಾಜಿ ರಾಷ್ಟ್ರಪತಿ ಪ್ರತಿಭಾ ತಾಯಿ ಪಾಟೀಲ್, ಕಿರಣ್ ಬೇಡಿ, ಕಲ್ಪನಾ ಚಾವ್ಲಾ ಇವರ ಪೋಟೋ ಗಳು ಸ್ತ್ರೀಯರಿಗೆ ಪುರುಷರು ಸಮಾನರು ಎಂದು ಸಾರುವ ಈ ಬ್ಯಾನರ್ ಸ್ತ್ರೀ ಭ್ರೂಣ ಹತ್ಯೆಗಳು ತಡೆಗಟ್ಟುವ ನಿಟ್ಟಿನಲ್ಲಿ ನಿಜಕ್ಕೂ ಈ ಜಾತ್ರೆಯಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಜಾತ್ರೆಯ ನಿಮಿತ್ಯ ಬ್ಯಾನರ್ ಗಳನ್ನು ಹಾಕಿ ಸ್ವಾಗತಿಸುವುದು ಸಾಮಾನ್ಯ ಆದರೆ ಸರ್ಕಾರದ ಹಂತದಲ್ಲಿ ಸ್ತ್ರೀ ಭ್ರೂಣ ಹತ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತದೆ ಆದರೆ ಒಂದಲ್ಲ ಒಂದು ರೀತಿಯಲ್ಲಿ ಸಮಾಜಮುಖಿ ಸಂದೇಶ ಸಾರುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿರುವ ನ್ಯಾಯವಾದಿ ಈಶ್ವರ್ ಘಾಡಿ ಅವರ ಈ ಕಾರ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾವಿರಾರು ಭಕ್ತರು ಬರುವ ಕಡೆ ಸ್ತ್ರೀ ಭ್ರೂಣ ಹತ್ಯೆಯ ಬಗ್ಗೆ ಸ್ತ್ರೀ ಮತ್ತು ಪುರುಷರು ಸಮಾನರು ಎಂದು ಸಂದೇಶ ಸಾರುವ ಕಾರ್ಯ ನಿಜಕ್ಕೂ ಶ್ಲಾಘನೀಯ.