Chikkodi

ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ : ಚುನ್ನಪ್ಪಾ ಪೂಜಾರಿ

Share

ಚಿಕ್ಕೋಡಿ:ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಎಂದು ರಾಜ್ಯ ರೈತ ಸಂಘ ಅಧ್ಯಕ್ಷರಾದ ಚುನಾಪ್ಪಾ ಪೂಜಾರಿ ಹೇಳಿದರು.

ರಾಯಬಾಗ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಕೇಂದ್ರ ಸರ್ಕಾರಗಳು ರೈತರನ್ನು ಕಡೆಗಣಿಸಿವೆ. ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದು ಈಗ ರೈತರನ್ನು ಮರೆತಿವೆ. ಹಾಗಾಗಿ ರೈತರು ಹೋರಾಟದ ಹಾದಿ ಹಿಡಿಯುವ ಅವಶ್ಯಕತೆ ಇದೆ. ಹಾಗಾಗಿ ರೈತರು ಒಗ್ಗಟ್ಟಾಗಬೇಕಿದೆ ಎಂದರು. ಎಲ್ಲ ರೈತರು ರೈತ ಸಂಘದ ದ್ಯೇಯೋದ್ದೇಶಗಳನ್ನು ಅರಿತುಕೊಂಡು ಸಂಘಟನೆಯನ್ನು ಬಲಪಡಿಸಬೇಕು. ನೊಂದವರಿಗೆ ನ್ಯಾಯಕೊಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಮೊದಲು ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಸುರೇಶ ಖೋತ, ಉಪಾಧ್ಯಕ್ಷರಾಗಿ ಲಕ್ಷ್ಮಣ ನಾಯಕ, ಕಾರ್ಯದರ್ಶಿಯಾಗಿ ಪವನ ಐಹೊಳೆ, ಸದಾಶಿವ ನಿಂಗನೂರೆ, ಸಂಜು ಯಡ್ರಾವಿ, ರೈತ ಸಂಘದ ಸದಸ್ಯರು ರೈತ ಮುಖಂಡರು ಮಹಿಳೆಯರಿಗೆ ರೈತ ಶಾಲು ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅಂಗಡಿ, ರಮೇಶ ಕೋಲಾರ, ಮಹಾದೇವ ಹೋಲಕಾರ, ತಮ್ಮನಿ ಪಾಟೀಲ,ಗ್ರಾಮ ಪಂಚಾಯತ ಅಧ್ಯಕ್ಷ ಅಶ್ವಿನಿ ಧನಗರ ಸೀಮಾ ಖೋತ ,ವಿಶಾಲ ಪಡಲಾಳೆ, ಶಶಿಕಾಂತ ಮಾಳಿ, ಅಜಿತ ಸಂಗಮೇಶ್ವರ, ಬಾಲಚಂದ್ರ ದತ್ತವಾಡೇ, ಮಹೇಶ ಮಾಂಗ, ಅಪ್ಪಸಾಹೇಬ ನಾಯಕ, ವಾಸು ಪಂಡ್ರೂಳೆ ಕೃಷ್ಣ ಖೋತ ಪದಾಧಿಕಾರಿಗಳು ರೈತರು ಮಹಿಳೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!