hubbali

3 ಜನ ಕಳ್ಳರ ಬಂಧನ ಆರೋಪಿಗಳಿಂದ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು

Share

ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 5,87,000 ರೂ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಮೂರು ಜನ ಆರೋಪಿ ಹಾಗೂ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.‌

ಕಳೆದ ಆಗಷ್ಟ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹುಬ್ಬಳ್ಳಿ ಎಪಿಎಂಸಿ ಈಶ್ವರನಗರ ಸಮೃದ್ಧಿ ಬಡಾವಣೆ, ಎಸ್.ಆರ್.ನಗರ ಅಂಕೋಲೆಕರ್ ಲೇಔಟ್ ಹಾಗೂ ಎಂಐಜಿ ಕಾಲೋನಿಯಲ್ಲಿ ಕಳ್ಳರು ಮನೆ ಕಳ್ಳತನ ಮಾಡಿ ಕೈಚಳಕ ತೋರಿದ್ದಾರೆ. ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 5,87,000 ರೂ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿದ್ದಪ್ಪ ಅಂಬಿಗೇರ್, ವಿಷ್ಣು ಅಂಬಿಗೇರ, ಕುನಾಲಸಿಂಗ್ ಟಾಕ್ ಹಾಗೂ ಅಪ್ರಾಪ್ತ ಪ್ರೀತಂ ಸೂಡಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣವನ್ನು ಬೇಧಿಸಿದ ನವನಗರ ಎಪಿಎಂಸಿ ಠಾಣೆಯ ಪೊಲೀಸರು ಮೂವರು ಆರೋಪಿಗಳು ಹಾಗೂ ಓರ್ವ ಅಪ್ರಾಪ್ತನನ್ನು ಬಂಧನ ಮಾಡಿದ್ದಾರೆ.

Tags:

error: Content is protected !!