hubbali

ನಟೋರಿಯಸ್ ರೌಡಿ ಶೀಟರ್ ಸೈಂಟಿಸ್ಟ್ ಮಂಜ್ಯಾನ ಖರಾಬ್ ಕಹಾನಿ ಬಿಚ್ಚಿಟ್ಟ:ಪೊಲೀಸ್ ಕಮಿಷನರ್

Share

ಆತ ನಟೋರಿಯಸ್.ಹೆಸರು ಸೈಂಟಿಸ್ಟ್ ಮಂಜ್ಯಾ.ಆದ್ರೆ ಅವನು ಸೈಂಟಿಸ್ಟ್ ಅಲ್ಲ.ನಟೋರಿಯಸ್ ಕ್ರಿಮಿನಲ್. ಆತನ ಮೇಲಿರೋದು ಬರೋಬ್ಬರಿ 36 ಕೇಸ್.ಹವಾ ಮಾಡೋ ಉದ್ದೇಶಕ್ಕೆ ಅವನು ಇಟ್ಕೊಂಡು‌ ಹೆಸರು ಸೈಂಟಿಸ್ಟ್.ಇದೇ ಸೈಂಟಿಸ್ಟ್ ಮಂಜ್ಯಾ ಇದೀಗ ಪೊಲೀಸರ ಕೈಗೆ ತಗಲಾಕೊಂಡಿದ್ದಾನೆ.ಮಂಜ್ಯಾ ಒಬ್ಬನೇ ಅಲ್ಲ,ಆತನ ಹೆಂಡತಿ ಮಗಳು ಕೂಡಾ ಲಾಕ್ ಆಗಿದ್ದಾರೆ.ಕೊಲೆ ಯತ್ನದ ಕೇಸ್ ನಲ್ಲಿ ಮಂಜ್ಯಾ ಅಲಿಯಾಸ್ ಸೈಂಟಿಸ್ಟ್ ಮಂಜ್ಯಾನಿಗೆ ಖಾಕಿ ಕೆಡ್ಡಾ ತೋಡಿದೆ.ಅಷ್ಟಕ್ಕೂ ಸೈಂಟಿಸ್ಟ್ ಮಂಜ್ಯಾ ಯಾರೂ ಏನ ಮಾಡಿದ್ದಾ ಅನ್ನೋದನ್ನ ತೋರಸ್ತೀವಿ ನೋಡಿ.

ಈ ಪೋಟೋದಲ್ಲಿರೋನ ಒಂದು ಸಾರಿ ಚೆನ್ನಾಗಿ ನೋಡಿ ಬಿಡಿ.ಈತನ‌ ಹೆಸರು ಮಂಜುನಾಥ ಬಂಡಾರಿ,ಅಲಿಯಾಸ್ ಸೈಂಟಿಸ್ಟ್ ಮಂಜ್ಯಾ.ಹುಬ್ಬಳ್ಳಿಯ ಮಂಟೂರ ರೋಡ್ ನಿವಾಸಿ ಇತನ ಮೇಲೆ ಬರೋಬ್ಬರಿ 36 ಕೇಸ್.ಹೌದು ಇದೇ ಮಂಜ್ಯಾ ಇದೀಗ ಪೊಲೀಸರ ಕೈಗೆ ತಗಾಲಕೊಂಡಿದ್ದಾನೆ.ಕೊಲೆ ಯತ್ನದ ಆರೋಪದಡಿ ಸೈಂಟಿಸ್ಟ್ ಮಂಜ್ಯಾ ಹಾಗೂ ಆತನ ಪತ್ನಿ, ಮಗಳು ಬಂಧನವಾಗಿದ್ದಾರೆ.ಹುಬ್ಬಳ್ಳಿ ಬೆಂಗೇರಿ ಸಮೀಪದ ಸೋಡಾ ಫ್ಯಾಕ್ಟರಿ ಹತ್ರ ಇರೋ ಅಬ್ದುಲ್ ಖಾದರ್ ಕುಂದಗೋಳ ಮನೆಗೆ ನುಗ್ಗಿ ಕೊಲೆ ಯತ್ನ ಕ್ಕೆ ಮುಂದಾಗಿದ್ದ‌.ಅದು ಕೂಡಾ ಕುದುರೆ ವಿಷಯಕ್ಕೆ.ಕುದುರೆ ಮೇಯಿಸೋ ವಿಚಾರಕ್ಕೆ ಜಗಳವಾಗಿ ಅದು ಕೊಲೆ ಹಂತಕ್ಕೆ ಹೋಗಿತ್ತು. ಹೀಗಾಗಿ ಮನೆಗೆ ನುಗ್ಗಿ ಕೊಲೆ ಮಾಡಲು ಸೈಂಟಿಸ್ಟ್ ಮಂಜ್ಯಾ ಯತ್ನಿಸಿದ್ದ.ಕಳೆದ ಎರಡು ದಿನಗಳ ಹಿಂದೆ ಮಂಜ್ಯಾ ಕೊಲೆಗೆ ಯತ್ನಿಸಿದ್ದ‌.ನಿನ್ನೆ ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಸೈಂಟಿಸ್ಟ್ ಮಂಜ್ಯಾ ನಟೋರಿಯಸ್ ಕ್ರಿಮಿನಲ್ ‌ಹೆಸರು ಸೈಂಟಿಸ್ಟ್.ಆದ್ರೆ ಮಾಡೋದು ಕ್ರಿಮಿನಲ್ ಕೆಲಸ‌.ಹುಬ್ಬಳ್ಳಿ ಅಲ್ಲ,ಪಕ್ಕದ ಜಿಲ್ಲೆಗಳಲ್ಲೂ ಇತ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾ‌ನೆ.ಕಳೆದ  ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ದೊಡ್ಡ ಇಸ್ಪೀಟ್ ರೇಡ್ ಆದಗಲೂ ಇ ಮಂಜ್ಯಾ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ‌.ಅವತ್ತಿನಿಂದ ಮಂಜ್ಯಾನಿಗಾಗಿ‌ ಪೊಲೀಸರು ಕಾಯತಿದ್ರು.ಇದೀಗ ಕೊಲೆ ಯತ್ನದ ಕೇಸ್ ದಾಖಲಾಗುತ್ತಲೇ ಮಂಜ್ಯಾನಿಗೆ ಪೊಲೀಸರು ಕೆಡ್ಡಾ ತೋಡಿದ್ದಾರೆ.ಈ ಮಂಜುನಾಥ್ ಬಂಡಾರಿಗೆ ಸೈಂಟಿಸ್ಟ್ ಅನ್ನೋ ಹೆಸರು ಬಂದಿದ್ದೇ ರೋಚಕ.ಬಿಲ್ಡಪ್ ಕೊಡಲು,ಈ ಹೆಸರನ್ನು ಇಟ್ಟುಕೊಂಡ ಓಡಾಡುತ್ತಿದ್ದಂತೆ.ಇತ ಯಾವ ಸೈಂಟಿಸ್ಟ್ ಅಲ್ಲ.ಇತ ಮಾಡೋದು ಬರೀ ಕೊಲೆ,ಕೊಲೆ ಯತ್ನ ದರೋಡೆ,ಕಳ್ಳತನ ಪ್ರಕರಣಗಳು.ಒಟ್ಟು 36 ಕೇಸ್ ಇತನ ಮೇಲಿವೆ.ಹಾಗಾದ್ರೆ ಯಾವ ಯಾವ ಕೇಸ್ ಇದೆ ಅನ್ನೋದನ್ನ ನೋಡೋದಾದರೆ.

IPC -302 – 2 ಕೇಸ್
IPC -307 – 2 ಕೇಸ್
IPC – 392 – 4 ಕೇಸ್
IPC – 394 – 4 ಕೇಸ್
IPC -395 – 4 ಕೇಸ್
IPC – 457 – 380 – 1 ಕೇಸ್
IPC – 379 – 8 ಕೇಸ್
IPC – 324 – 2  ಕೇಸ್
NDPC – 2 ಕೇಸ್
CRPC -109,110 – ,5 ಕೇಸ್
RP ಕಾಯ್ದೆ – 2 ಕೇಸ್
ಕೆಪಿ ಆ್ಯಕ್ಟ್ – 1 ಕೇಸ್

ಈ ನಟೋರಿಯಸ್ ಇದೀಗ ಬಂಧನವಾಗಿದ್ದು,ಈ ಹಿಂದೆ ಈತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ‌,ಅಲ್ಲದೆ ಜೈಲ್ ನಲ್ಲಿ ಕಿರಿಕ್ ಮಾಡಿಕೊಂಡಿದ್ದ.ಇದೀಗ ಸೈಂಟಿಸ್ಟ್ ಮಂಜ್ಯಾ ಬಂಧನವಾಗಿದ್ದು,ಈತ ಈ ಹಿಂದೆ ಮಾಡಿರೋ ಬೆಳಕಿಗೆ ಬಾರದ ಅಪರಾಧ ಕೃತ್ಯಗಳ ಕುರಿತು ಖಾಕಿ ತನಿಖೆ ನಡೆಸುತ್ತೇ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.

ಒಟ್ಟಾರೆ ನಟೋರಿಯಸ್ ಸೈಂಟಿಸ್ಟ್ ಮಂಜ್ಯಾಗೆ ಖಾಕಿ‌ ಕೆಡ್ಡಾ ತೋಡಿದೆ.ನೋಡೋಕೆ ಸೈಲೆಂಟ್ ಕಾಣೋ ಇತ ಮಾಡೋದು ಮಾತ್ರ ಕ್ರಿಮಿನಲ್ ಚಟುವಟಿಕೆ. ಅದು ಕೇವಲ ಹುಬ್ಬಳ್ಳಿ ಮಾತ್ರ ಅಲ್ಲ,ರಾಜ್ಯದ ಕೆಲ ಕಡೆ ಇತ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ,ಸಾಕಷ್ಟು ಬಾರಿ ಜೈಲೂಟ್ ತಿಂದು ಬಂದಿದ್ರು ಕೂಡ ಸುಧಾರಿಸದೆ ಮತ್ತೇ ತನ್ನ ಹಳೇ ಚಾಳಿ ಮುಂದುವರೆಸಿರುವ ಈತನ ಮೇಲೆ ಖಾಕಿ ಕಣ್ಣಿಟ್ಟಿದ್ದು ಅಬ್ದುಲ್ ಖಾದರ್ ಎಂಬ ವ್ಯಕ್ತಿ ಹಲ್ಲೆ ಕೊಲೆ ಯತ್ನ ಆರೋಪದಡಿ ಜೈಲಿಗೆ ಅಟ್ಟಿದ್ದಾರೆ.

Tags:

error: Content is protected !!