Uncategorized

ಉಗಾರ ಪಟ್ಟಣದಲ್ಲಿ ಸೋಮವಾರ ಶ್ರೀನಿವಾಸ ಕಲ್ಯಾಣ; ಸುನೀತಾ ನಾಯ್ಕ್

Share

ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳ ಇವರಿಂದ ಸೋಮವಾರ ರಂದು ಹ ಶ್ರೀನಿವಾಸ ಕಲ್ಯಾಣ ಉತ್ಸವ ಕಾರ್ಯಕ್ರಮ ಭಕ್ತಿಯಿಂದ ಜರುಗಿಲಿದೆ ಎಂದು ಭಜನಾ ಮಂಡಳ ಅಧ್ಯಕ್ಷ ಶ್ರೀಮತಿ ಸುನಿತಾ ನಾಯ್ಕ ತಿಳಿಸಿದರು

ಶುಕ್ರವಾರ ರಂದು ಉಗಾರದಲ್ಲಿ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳ ಸದಸ್ಯರು ಒಂದುಗೂಡಿ ಸೋಮವಾರ ದಿನಾಂಕ 10 ರಂದು ಜರುಗುವ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡುವಾಗ, ಕಳೆದ ಸುಮಾರು 12 ವರ್ಷಗಳಿಂದ ಉಗಾರ ಹಾಗೂ ಪರಿಸರದಲ್ಲಿ ಮಹಿಳಾ ಸದಸ್ಯರಿಂದ ವಿವಿಧ ಸಮಾಜದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ.

ಸೋಮವಾರ ರಂದು ಬೆಳಗ್ಗೆ ಶ್ರೀನಿವಾಸನ ಪಲ್ಲಕ್ಕಿ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು ಪಟ್ಟಣದ ಪ್ರಮುಖ ಮಾರ್ಗಗಳ ಮುಖಾಂತರ ರಾಘವೇಂದ್ರ ಮಠದವರಿಗೆ ಮಠದವರಿಗೆ ಪಲ್ಲಕ್ಕಿ ಮಹೋತ್ಸವ ಶೋಭಾ ಯಾತ್ರೆ ಜರುಗಲಿದೆ ಇದರಲ್ಲಿ ಉಗಾರ ಸೇರಿದಂತೆ ಪರಿಸರದಲ್ಲಿಯ ಶ್ರೀ ರಾಘವೇಂದ್ರರ ಸದ್ಭಕ್ತರು ಪಾಲ್ಗೊಳ್ಳಲಿದ್ದಾರೆ. ಪಲ್ಲಕೀಯ ಉಸ್ತವ ಹಾಗೂ ಕಾರ್ಯಕ್ರಮದ ಉದ್ದೇಶವೆಂದರೆ ಎಲ್ಲ ವಿದ್ಯಾರ್ಥಿಗಳಿಗೆ ಇಂದಿನ ಯುವಕರಿಗೆ ದಯೆ ನಮೃತಿ ದೇವರಲ್ಲಿರುವ ಭಯ ಭಕ್ತಿ ಅವರಲ್ಲಿ ಬೆಳೆಸಿಕೊಳ್ಳಲು ಮತ್ತು ಕೆಲವು ಯುವಕರು ದುಷ್ಟ ಚಟುಗಳಿಗೆ ಅಂಟಿಕೊಳ್ಳುತ್ತಿದ್ದಾರೆ ಇದರ ಬಗ್ಗೆ ಅವರಲ್ಲಿ ಪರಿವರ್ತನೆ ಮೂಡಿಸುವ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮದ ನಿಮಿತ್ಯವಾಗಿ ರಾಮದುರ್ಗದ ವಿಜಯೇಂದ್ರ ಆಚಾರ್ಯ ಜೋಶಿ, ಅಥಣಿಯ ಶ್ರೀ ಜಯರಾಮ ಆಚಾರ್ಯ ಮದನಪಲ್ಲಿ, ಚಿಕ್ಕೋಡಿಯ ತಹಸಿಲ್ದಾರ್ ಶ್ರೀಮತಿ ಪ್ರಮೀಳಾ ದೇಶಪಾಂಡೆ, ಮುಂಗಾರು ಮಹಿಳಾ ಮಂಡಳದ ಅಧ್ಯಕ್ಷ ರಾಧಿಕಾ ಸಿರಿರಾಮ ಕರ, ಮಾಜಿ ಮಹಿಳಾ ಮಂಡಳ ಅಧ್ಯಕ್ಷ ಸ್ಮಿತಾ ತಾಯಿ ಸಿರೇಗಾಂಕರ, ಭಜನಿ ಮಂಡಳಗಳಾದ ಚಿಕ್ಕೋಡಿ, ಗೋಕಾಕ, ಘಟಪ್ರಭಾ, ಮಚ್ಚಾ ಪುರ್, ಉಗಾರ ದಿಂದ ಆಗಮಿಸಲಿದ್ದು ಅದ್ದೂರಿಯಾಗಿ ಕಾರ್ಯಕ್ರಮ ಜರುಗಿಲಿದೆ ಎಂದು. ಸುನಿತಾ ನಾಯಕ ಹೇಳಿದರು. ಶ್ರೀ ಮಹಾಲಕ್ಷ್ಮಿ ಭಜನಾ ಮಂಡಲಳ ಸದಸ್ಯರಾದ ರಚನಾ ದೇಶಪಾಂಡೆ, ವಿದ್ಯಾ ದೇಶಪಾಂಡೆ, ಸಂಧ್ಯಾ ಇನಾಮ್ದಾರ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

ಸುಕುಮಾರ ಬನ್ನೂರೆ
ಇನ್ನ ನ್ಯೂಸ್ ಕಾಗವಾಡ

Tags:

error: Content is protected !!