ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗೆ ಅನುದಾನ ಭರಿಸುವ ಭರದಲ್ಲಿ ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡಿದೆ ಅನ್ನೋ ಮಾತು ಕೇಳಿಬರ್ತಿದ್ದು,ಇದಕ್ಕೆ ಪ್ರಯಾಗ ಕುಂಭಮೇಳದ ಪುಣ್ಯ ಸ್ನಾನದ ವೇಳೆ ಗುತ್ತಿಗೆದಾರ ಬಾಕಿ ಬಿಲ್ ಸರ್ಕಾರ ಭಾರತದ ಗ ಪಾವತಿಸಲಿ ಎಂದು ಮಡೆಸ್ನಾನ ಮಾಡಿ ಗಮನ ಸೆಳೆದಿದ್ದಾನೆ.ಬಾಕಿ ಬಿಲ್ ಗಾಗಿ ಪ್ರಯಾಗ ಪುಣ್ಯಸ್ನಾನ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…
GFX…..
ಪ್ರಯಾಗ ಕುಂಭಮೇಳದಲ್ಲಿ ಬಾಕಿ ಬಿಲ್ ಪಾವತಿಗಾಗಿ ಪ್ರಾರ್ಥನೆ…
ಬಾಗಲಕೋಟೆ ಜಿಲ್ಲೆಯ ಗುತ್ತಿಗೆದಾರ ಪ್ರಯಾಗ ಪುಣ್ಯಸ್ನಾನದ ವೇಳೆ ಪ್ರಾರ್ಥನೆ..
ರಾಜ್ಯದ ಎಲ್ಲ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುವಂತೆ ತ್ರೀವೇಣಿ ಸಂಗಮದಲ್ಲಿ ಪ್ರಾರ್ಥನೆ..
ತ್ರೀವೇಣಿ ಸಂಗಮದ ಪುಣ್ಯಸ್ನಾನದ ವೇಳೆ ಗುತ್ತಿಗೆದಾರ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್..
ಒಂದೆಡೆ ಪ್ರಯಾಗ ಮಹಾ ಕುಂಭಮೇಳೆದಲ್ಲಿ ಭಾಗಿಯಾದ ಕೋಟ್ಯಾಂತರ ಜನ.ಮತ್ತೊಂದೆಡೆ ತ್ರೀವೆಣಿ ಸಂಗಮ ಪುಣ್ಯ ಸ್ನಾನದ ವೇಳೆ ಕರ್ನಾಟಕ ಸರ್ಕಾರ ಗುತ್ತಿಗೆದಾರರ ಬಾಕಿ ಬಿಲ್ ಬೇಗ ಪಾವತಿಸಲಿ ಎಂದು ಪ್ರಾರ್ಥನೆ ಮಾಡುತ್ತ ಪುಣ್ಯಸ್ನಾನ ಮಾಡಿದ ಗುತ್ತಿಗೆದಾರ.ಇಂತಹ ದೃಶ್ಯದ ವಿಡಿಯೋ ವೈರಲ್ ಇದೀಗ ಗಮನ ಸೆಳೆಯುತ್ತಿದೆ.ಹೌದು ಬಾಗಲಕೋಟೆ ಜಿಲ್ಲೆ ಹುನಗುಂದ್ ಪಟ್ಟಣದ ಕೆಲ ಗುತ್ತಿಗೆದಾರರು ಪ್ರಯಾಗ ಮಹಾ ಕುಂಬಮೇಳದಲ್ಲಿ ಭಾಗಿಯಾಗಿ ತ್ರೀವೇಣಿ ಸಂಗಮ ಪುಣ್ಯ ಸ್ನಾನ ಮಾಡಿದ್ದಾರೆ.ಅದ್ರಲ್ಲೂ ಪುಣ್ಯಸ್ನಾನ ಸಮಯದಲ್ಲಿ ರಾಜ್ಯ ಸರ್ಕಾರ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುವಂತೆ ಪ್ರಾರ್ಥನೆ ಮಾಡುತ್ತಾ ಪುಣ್ಯ ಸ್ನಾನ ಮಾಡಿದ ಗುತ್ತಿಗೆದಾರರ ವಿಡಿರೋ ವೈರಲ್ ಆಗಿ ಬಾರಿ ಸದ್ದು ಮಾಡ್ತಿದೆ…
ಇನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ೫ ಗ್ಯಾರೆಂಟಿ ಯೋಜನೆಗಳನ್ನ ಸಹಕಾರಕ್ಕಾಗಿ ಕಲ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕಿದ್ದು,ಅದಕ್ಕೆ ರಾಜ್ಯ ಗುತ್ತಿಗೆದಾರರ ಅನುದಾನವೂ ಹೊರತಾಗಿಲ್ಲ.ಸಾಲ ಸೂಲ ಮಾಡಿ ಹಿಡಿದ ಟೆಂಡರ್ ಮುಗಿಸಿ ಸರ್ಕಾರಕ್ಕೆ ಹಸ್ತಾಂತರಿಸಿ ೫-೬ ತಿಂಗಳು ಗತಿಸಿದ್ರೂ ಇನ್ನೂ ಕೆಲ ಗುತ್ತಿಗೆದಾರರಿಗೆ ಅನುದಾನ ಸಿಕ್ಕಿಲ್ಲ.ಅದಕ್ಕಾಗಿ ಪ್ರಯಾಗ ಮಹಾ ಕುಂಭಮೇಳದಲ್ಲಿ ಭಾಗಿಯಾದ ಬಾಗಲಕೋಟೆ ಜಿಲ್ಲೆಯ ಗುತ್ತಿಗೆದಾರರ ಬಾಕಿ ಗುತ್ತಿಗೆದಾರರ ಬಿಲ್ ಪಾವತಿಸುವಂತೆ ಪ್ರಾರ್ಥನೆ ಮಾಡಿದ್ದು,ಸರ್ಕಾರ ಗುತ್ತಿಗೆದಾರರ ಬಗ್ಗೆ ಕಾಳಜಿ ವಹಿಸಿಲಿ ಅಂತಾರೆ ಗುತ್ತಿಗೆದಾರರು…
ಒಟ್ಟಿನಲ್ಲಿ ಪ್ರಯಾಗ ಮಹಾ ಕುಂಭಮೇಳದಲ್ಲಿ ಬಾಗಲಕೋಟೆ ಜಿಲ್ಲೆ ಗುತ್ತಿಗೆದಾರನ ಬಾಕಿ ಬಿಲ್ ಪಾವತಿಸುವಂತೆ ಪುಣ್ಯಸ್ನಾನದ ವೇಳೆ ಮಾಡಿದ ಪ್ರಾರ್ಥನೆ ವಿಡಿಯೋ ಸಖತ್ ವೈರಲ್ ಆಗಿದೆ.ಸರ್ಕಾರ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಿ ಗುತ್ತಿಗೆದಾರರ ಕಷ್ಟಕ್ಕೆ ಸ್ಪಂಧಿಸುವಂತೆ ಸಾರ್ವಜನಿಕರ ಆಗ್ರಹ…
ಇನ್ ನ್ಯೂಸ್ ಬಾಗಲಕೋಟ