ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿಂದು ಆದರ್ಶ ಶಿಕ್ಷಕರ ವೇದಿಕೆ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಉಚಿತ ಟ್ಯಾಕ್ಸ್ ಫಾರ್ಮ್ ಗಳನ್ನು ನೀಡಲಾಗುವುದೆಂದು ಜಿಲ್ಲಾಧ್ಯಕ್ಷ ಉಮೇಶ್ ಕೌಲಗಿ ಅವರು ಹೇಳಿದರು. ತಾಲೂಕಿನಲ್ಲಿ ಹೂವಿನ ಹಿಪ್ಪರಗಿ ಮನಗೂಳಿ ಕೋಲಾರ ನಿಡಗುಂದಿ ವಲಯಗಳನ್ನಾಗಿ ಮಾಡಿ ವಿತರಿಸಲಾಗುವುದು.
ಶಿಕ್ಷಕ ಬಂಧುಗಳು ಪಡೆಯಬೇಕೆಂದು ಹೇಳಿದರು. ಗುರುಗಳು ಗುರುಮಾತೆಯರು ಕಚೇರಿಗೆ ಅಲೆದಾಡಬಾರದು ಎಂಬ ಸದುದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀ ಬಾರಿಕಾಯಿ ಸರ್ ಶ್ರೀ ಮುತ್ತಾಗಿ ಸರ್ ಶ್ರೀ ಎಂ ಎನ. ಯಾಳವಾರ ಶ್ರೀ ಹೊ ಣ್ಣಪ್ಪ ಗೊಳಸಂಗಿ ಕೊಟ್ರೇಶ್ ಹೆಗಡೆಯಾಳ ಎನ್ಎಸ್ ಕಾಳಗಿ ಬಿವಿ ಚಕ್ರಮಣಿ ಬಸವರಾಜ್ ಚಿಂಚೋಳಿ ಚಿದಾನಂದ ಹೂಗಾರ್ ಗೋಪಾಲ ಲಮಾಣಿ ಪಿ ಎಸ್ ಬಾಗೇವಾಡಿ ಮೊದಲಾದ ಗುರುಗಳು ಉಪಸ್ಥಿತರಿದ್ದರು.