ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಅಭ್ಯರ್ಥಿಗೆ ಅವಕಾಶ ನೀಡುವುದಾದರೇ ನಮ್ಮ ಬಣದಿಂದ ಐ ಎಂ ರೆಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು. ಪಾರ್ಟಿ ಸ್ವಚ್ಛ ಮತ್ತು ಗಂಗೆಯಂತೆ ಪವಿತ್ರವಾಗಲಿ ಎಂಬುದೇ ನಮ್ಮ ಹೋರಾಟ ಎಂದರು.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ನಾವು ಜಾತಿ ಸಮೀಕರಣವನ್ನು ಮಾಡಿ ತಿರ್ಮಾಣಿಸುತ್ತೇವೆ. ದಲಿತರಿಗೆ ಸ್ಥಾನ ನೀಡುವುದಾದರೇ ಅದಕ್ಕೂ ನಾವು ಸಿದ್ಧ. ಲಿಂಗಾಯಿತರಿಗೆ ಸ್ಥಾನ ನೀಡುವಾದರೇ ಐ ಎಂ ರೆಡಿ ಎಂದರು.
ಮಾಜಿ ಸಚಿವರಾದ ಶ್ರೀರಾಮುಲು ಬಿ.ಎಲ್. ಸಂತೋಷ ಅವರನ್ನು ಭೇಟಿಯಾದರೇ ಒಳ್ಳೆಯದಾಯಿತು. ಅವರು ನಮ್ಮವರೇ. ವಾಲ್ಮೀಕಿ ಸಮಾಜದವರು ಅಧ್ಯಕ್ಷರಾದರೇ ತಪ್ಪೇನು ಎಂದರು.
ನಾವು ಗಮನಸೆಳೆಯಬೇಕೆಂದೇ ಈ ಎಲ್ಲವನ್ನು ಮಾಡುತ್ತಿದ್ದೇವೆ. ಮೂರು ಪಾಯಿಂಟಗಳಲ್ಲಿ ಪಾಸ್ ಆದವರಿಗೆ ಅಧ್ಯಕ್ಷಸ್ಥಾನವನ್ನು ನೀಡಲಿ. ನಮ್ಮಲ್ಲಿ ಕುರ್ಚಿಗಾಗಿ ತಿಕ್ಕಾಟವಿಲ್ಲ. ಪಾರ್ಟಿ ಗಂಗೆಯಂತೆ ಸ್ವಚ್ಛವಾಗಬೇಕು, ಪವಿತ್ರವಾಗಬೇಕೆಂದರು.
ಒಂದು ವೇಳೆ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆದರೇ, ಮುಂದಿನ ಹೋರಾಟದ ಬಗ್ಗೆ ಆವಾಗ ನಿರ್ಣಯಿಸಲಾಗುವುದು ಎಂದರು.