ಉಗಾರ ಬುದ್ರುಕ ಗ್ರಾಮ ಪಂಚಾಯತಿಯ ಸದಸ್ಯರು ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಈ ಘಟನೆ ಸಂಬAಧ ಸ್ಥಳಕ್ಕೆ ತಲುಪಿದ ತಾಲೂಕಾ ಪಂಚಾಯತಿ ಅಧಿಕಾರಿಗಳು ಸದಸ್ಯರೊಂದಿಗೆ ಚರ್ಚೆ ನಡೆಸಿ ನಿಯಂತ್ರಿಸಲು ಪ್ರಯತ್ನಿಸಿದರೂ, ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.
ಶನಿವಾರ ರಂದು ಉಗಾರ ಬುದ್ರುಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಜ್ವಲಾ ಪದ್ಮಣ್ಣ ಚೌಗುಲೆ, ಉಪಾಧ್ಯಕ್ಷ ಅಮಿನ ಶೇಖ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಇವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು, ಪ್ರತಿಭಟನೆ ಕೈಗೊಳ್ಳಲಾಯಿತು.
ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮ ಪಂಚಾಯಿತಿಯ ಸದಸ್ಯರು ಅಭಿವೃದ್ಧಿ ಅಧಿಕಾರಿಯಿಂದ ಯಾವುದೇ ಸಹಕಾರ ದೊರಕುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸರಿಯಾದ ಸಮಯಕ್ಕೆ ಪಂಚಾಯಿತಿಗೆ ಹಾಜರಾಗುವುದಿಲ್ಲ ಮತ್ತು ಸುಮಾರು ಒಂದು ಕೋಟಿಗಿಂತ ಅಧಿಕ ಮೌಲ್ಯದ ನರೇಗಾ ಯೋಜನೆಯ ಕೆಲಸ ಕೈಗೊಂಡಿದ್ದರೂ, ಅದರ ಬಿಲ್ಲ್ ಮಂಜೂರಾಗಿಲ್ಲ. ಈ ಸಂಬAಧ ಪ್ರತಿರೋಧ ವ್ಯಕ್ತಪಡಿಸುತ್ತಾ, ಸದಸ್ಯರು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಿದರೆ, ಅಭಿವೃದ್ಧಿ ಅಧಿಕಾರಿಗಳು “ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂಬ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸದಸ್ಯರು ಉಗ್ರವಾಗಿ ಪ್ರತಿಸ್ಪಂದಿಸಿದ್ದಾರೆ.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಆರೋಪಿಸಿದ್ದಂತೆ, ಪಿಡಿಓ ರಾಕೇಶ್ ಕಾಂಬಳೆ ಕಳೆದ ಎರಡು ವರ್ಷಗಳಿಂದ ಸರಿಯಾದ ಸಮಯಕ್ಕೆ ಪಂಚಾಯಿತಿಗೆ ಹಾಜರಾಗುತ್ತಿಲ್ಲ ಮತ್ತು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿಲ್ಲ. ಅಲ್ಲದೆ, ಸದಸ್ಯರಿಗೆ ಅವಮಾನಿಸುತ್ತಿದ್ದು, ನರೇಗಾ ಯೋಜನೆಯ ಕಾಮಗಾರಿಗಳು ಪೂರ್ಣಗೊಂಡರೂ ಬಿಲ್ ಮಂಜೂರಿಗೆ ವಿಳಂಬ ಮಾಡುತ್ತಿದ್ದಾರೆ.
ಜನವರಿ ೨೬ ರಂದು ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೂ ಅವರು ಗೈರಾಗಿದ್ದರು. ಈ ಎಲ್ಲಾ ವಿಚಾರಗಳ ವಿರುದ್ಧ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದಾಗ, ಅಧಿಕಾರಿಯು “ನಿಮ್ಮ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಈ ಬಗ್ಗೆ ಎಲ್ಲ ಸದಸ್ಯರು ಜಿಲ್ಲಾಪಂಚಾಯಿತಿ ಸಿಇಒಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದು, ತಮ್ಮ ಮೇಲೆ ಕ್ರಮ ಜರುಗಿಸಿ ಬಂಧಿಸುವವರೆಗೆ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ. ಇದೇ ರೀತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಮಿನ್ ಶೇಖ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣಾ ವಾಲಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಸದಸ್ಯರ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲಿ ಹಾಜರಿದ್ದ ಪಿಡಿಓ ರಾಕೇಶ್ ಕಾಂಬಳೆಯಿAದ ಸದಸ್ಯರ ಆರೋಪಗಳ ಕುರಿತು ವಿವರ ಕೇಳಿ, “ಸಭ್ಯದೊಂದಿಗೆ ಹೊಂದಾಣಿಕೆಯಿಲ್ಲದೇ ಅಭಿವೃದ್ಧಿ ಕಾಮಗಾರಿಗೆ ಸಹಕರಿಸುತ್ತಿಲ್ಲ” ಎಂಬ ಜನರ ಆರೋಪಗಳ ಬಗ್ಗೆ ಸ್ಪಷ್ಟನೆ ಪಡೆದರು.
ಅಧಿಕಾರಿ ವೀರಣ್ಣಾ ವಾಲಿ ಈ ಬಗ್ಗೆ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಮತ್ತು ಸೂಕ್ತ ಕ್ರಮ ಜರುಗಿಸಲು ಸಹಾಯ ಮಾಡುತ್ತೇನೆ ಎಂದು ಸದಸ್ಯರಿಗೆ ಭರವಸೆ ನೀಡಿದ ಬಳಿಕ ಅಲ್ಲಿಂದ ತೆರಳಿದರು.
ಉಗಾರ ಬದ್ರುಕ್ ಗ್ರಾಮ ಪಂಚಾಯಿತಿಗೆ ಒಟ್ಟು ೨೬ ಸದಸ್ಯರು ಒಂದೇ ಗುಂಪಿನಿAದ ಆಯ್ಕೆಯಾಗಿದ್ದರು. ಅವರ ಆಗಮನಕ್ಕೆ ಗ್ರಾಮದಲ್ಲಿ ಭಾರೀ ಸ್ವಾಗತ ದೊರಕಿತ್ತು. ಆದರೆ ಅಭಿವೃದ್ಧಿ ಕಾಮಗಾರಿಗಳು ಮುಂದುವರಿಯದೆ ಇದ್ದುದರಿಂದ, ಈಗ ಸದಸ್ಯರು ಮುಜುಗರ ಅನುಭವಿಸುತ್ತಿದ್ದಾರೆ.
ಈ ಸದಸ್ಯರಲ್ಲಿ ಇಬ್ಬರು ನ್ಯಾಯವಾದಿಗಳು ಹಾಗೂ ಇಬ್ಬರು ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿರುವ ಪದವೀಧರರು ಇದ್ದಾರೆ. ಇನ್ನೂಳಿದ ಸದಸ್ಯರು ಒಳ್ಳೆಯ ಶಿಕ್ಷಣ ಪಡೆದಿದ್ದವರಿದ್ದಾರೆ. ಅವರು ಗ್ರಾಮ ಅಭಿವೃದ್ಧಿಯ ಗುರಿ ಇಟ್ಟುಕೊಂಡು ಬಂದರೂ, ಹಲವು ಸಮಸ್ಯೆಗಳು ಎದುರಾಗಿವೆ. ನರೇಗಾ ಯೋಜನೆಯಡಿ ಚರಂಡಿ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳು ಕೈಗೊಳ್ಳಲಾಗಿತ್ತು. ಕೆಲ ಯುವಕರು ಸ್ವಂತ ಹಣ ಖರ್ಚು ಮಾಡಿ ಕೆಲಸವನ್ನು ಪೂರ್ಣಗೊಳಿಸಿದರೂ, ಎರಡು ವರ್ಷ ಕಳೆದರೂ ಅವರ ಹಣ ಮಂಜೂರಾಗಿಲ್ಲ.
ಈ ಸಮಸ್ಯೆಯ ಬಗ್ಗೆ ಅನೇಕ ಬಾರಿ ಸ್ಥಳೀಯ ಶಾಸಕರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಪರಿಹಾರ ದೊರಕಿಲ್ಲ. ಈ ಅನ್ಯಾಯದ ವಿರುದ್ಧ ಕೋಪಗೊಂಡ ಯುವಕರು, ಅಧಿಕಾರಿಗಳ ಮುಂದೆ ವಿಶದ ಬಾಟಲಿ ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರಾದ ಶ್ರಾವಣ ಗೊಂಧಳಿ, ದಲಿತ ಮುಖಂಡ ಸಾಗರ ಪೂಜಾರಿ, ಪ್ರಶಾಂತ್ ಖುರ್ಪೆ, ಅಕ್ಷಯ ಬಳೋಲ್, ಸುರೇಶ ಪರಾಂಜಪೆ, ರಾಹುಲ ಭೋಸಲೆ, ಪ್ರದೀಪ ನಾಯಿಕ ಇವರು ಅಧಿಕಾರಿಗಳ ಮುಂದೆ ವಿಶದ ಬಾಟಲಿ ಪ್ರದರ್ಶಿಸಿದರು.
ಪ್ರತಿಭಟನೆಯಲ್ಲಿ ಸದಸ್ಯರಾದ ಪ್ರಶಾಂತ ವಸವಾಡೆ, ದಿಲಾವರ ನೇಜಕರ, ಮುನಾಫ್ ಚೌಧರಿ, ನಜೀರ ಪಠಾನ, ಉದಯ ಕಾಂಬಳೆ, ಅಣ್ಣಾ ಪಾಟೀಲ, ಅಭಿಷೇಕ ಚೌಗಲಾ, ಶಶೀಕಾಂತ ತಳವಾರ, ಉಮೇಶ ನಾಯಿಕ, ಸೇರದಂತೆ ಅನೇಕ ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು