ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂಬ ಸ್ನೇಹಮಯಿ ಕೃಷ್ಣ ಅವರ ಅರ್ಜುನ ಯನ್ನು ಧಾರವಾಡ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಯಿತು. ಮುಂಜಾನೆಯಿಂದ ಮದ್ಯಾಹ್ನದವರೆಗೆ ಅಂದರೆ ಮೂರು ಗಂಟೆ ವಿಚಾರಣೆ ನಡೆದಿದ್ದು, ಬಳಿಕ ಮದ್ಯಾಹ್ನದ ನಂತರ ಎರಡು ಗಂಟೆಗಳ ಕಾಲ್ ನ್ಯಾಯಾಧೀಶರು ವಾದ ಪ್ರತಿವಾದ ಆಲಿಸಿ, ಈಗ ತೀರ್ಪನ್ನು ಕಾಯ್ದಿರಿಸಿದ್ದಾರೆ.
ಮುಡಾ ಪ್ರಕರಣ ಸಿಬಿಐಗೆ ನೀಡುವ ಅರ್ಜಿ ವಿಚಾರಣೆ ಪೂರ್ಣಗೊಳ್ಳಿಸಿದ ಹೈ ಕೋರ್ಟ್ಹೌದು ಗಂಟೆ ವಾದ ಪ್ರತಿವಾದ ಆಲಿಸಿದ ಗೌರವಾನ್ವಿತ ಹೈ ಕೋರ್ಟ್ ನ್ಯಾಯಾಧೀಶ ನಾಗಪ್ರಸನ್ನ ಸಿಎಂ ಸಿದ್ದರಾಯ್ಯವರಿಗೆ ಸಂಕಷ್ಟ ತಂದೊಡ್ಡುತ್ತಾ ಹೈ ಕೋರ್ಟ ತೀರ್ಪು…?
ವೈ- ಮುಡಾ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಇಂದು ಧಾರವಾಡ ಹೈಕೋರ್ಟನಲ್ಲಿ ನ್ಯಾಯಾಧೀಶರು ಪೂರ್ಣಗೊಳಿಸಿ ತೀರ್ಪ ಕಾಯ್ದಿರಿಸಿದ್ದಾರೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇಂದು ಧಾರವಾಡ ಹೈಕೋರ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ಈ ಅರ್ಜಿ ವಿಚಾರಣೆ ಧಾರವಾಡ ಹೈಕೋರ್ಟ್ನಲ್ಲೇ ಕೈಗೊಂಡಿದ್ದರು, ಸೋಮವಾರ ಅಂದರೆ ಇಂದು ಮುಂಜಾನೆಯಿಂದಲೇ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಧ್ಯಾಹ್ನ ಲಂಚ ಹವರ್ಸ್ರೆಗೂ ಸುದೀರ್ಘ ವಿಚಾರಣೆ ನಡೆಸಿದರು. ಮದ್ಯಾಹ್ನದ ಮತ್ತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಸಂಜೆ 4 ಗಂಟೆಯವರೆಗೂ ವಾದ-ಪ್ರತಿವಾದ ಆಲಿಸಿ ಮುಡಾ ಹಗರಣವನ್ನು ಸಿಬಿಐ ತನಿಖೆ ವಹಿಸಬೇಕಾ ಅಥವಾ ಬೇಡವಾ ಎಂಬ ತೀರ್ಪನ್ನು ಕಾಯ್ದಿರಿಸಿತು. ಈ ತೀರ್ಪು ಯಾವಾಗ ಬೇಕಾದರೂ ಹೊರಬರಬಹುದು ಎಂದು ಹೇಳಲಾಗುತ್ತಿದೆ. ಕೋರ್ಟ್ ಕಲಾಪದ ನಂತರ ಹೊರ ಬಂದ ಸ್ನೇಹಮಯಿ ಕೃಷ್ಣ ಮಾತನಾಡಿ, ಸಿಬಿಐಗೆ ಈ ಪ್ರಕರಣವನ್ನು ಏಕೆ ಹಸ್ತಾಂತರಿಸಬೇಕು ಎಂಬುದನ್ನು ನಮ್ಮ ವಕೀಲರು ವಾದ ಮಾಡಿದ್ದಾರೆ. ಸಿಎಂ ಪತ್ನಿ ಹಾಗೂ ಸಚಿವ ಭೈರತಿ ಸುರೇಶ ಅವರಿಗೆ ಇಡಿ ನೋಟಿಸ್ ಕೊಟ್ಟಿದೆ. ಈ ನೋಟಿಸ್ ಪ್ರಶ್ನಿಸಿ ಇವರು ಕೋರ್ಟ್ಗೆ ಹೋಗಿದ್ದ್ಯಾಕೆ? ತಪ್ಪು ಮಾಡಿಲ್ಲ ಎಂದ ಮೇಲೆ ಕೋರ್ಟ್ಗೆ ಹೋಗಬಾರದಿತ್ತು. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಈ ಮುಡಾ ಪ್ರಕರಣ ಸಿಬಿಐಗೆ ಹಸ್ತಾಂತರವಾಗುವುದು ಸತ್ಯ. ನ್ಯಾಯಪೀಠ ಈ ಬಗ್ಗೆ ಯಾವಾಗ ಬೇಕಾದರೂ ತೀರ್ಪು ಕೊಡಬಹುದು. 50:50 ಅನುಪಾತದಲ್ಲಿ ನಿವೇಶನದ ಆದೇಶ ಇದೆಯಾ ಎಂಬುದನ್ನು ಸರ್ಕಾರ ತಿಳಿಸಲಿ. ಎಲ್ಲಿಯೂ ಇದರ ಬಗ್ಗೆ ಉಲ್ಲೇಖವಿಲ್ಲ. ಅದನ್ನು ತೋರಿಸಿದರೆ ನಾನು ಹೋರಾಟ ನಿಲ್ಲಿಸಿ, ನಾನೇ ಜೈಲಿಗೆ ಹೋಗುತ್ತೇನೆ ಎಂದರು.
ಸಿಎಂ ಸಿದ್ದರಾಮಯ್ಯ ಪರ ಅಭಿಷೇಕ ಮನು ಸಿಂಫ್ಟಿ, ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕಪಿಲ್ ಸಿಬಲ್, ವಿವಾದಿತ ನಿವೇಶನದ ಮೂಲ ಮಾಲೀಕ ಜೆ.ದೇವರಾಜ ಪರ ದುಷ್ಯಂತ ಧವೆ ಹಾಗೂ ಸ್ನೇಹಮಯಿ ಕೃಷ್ಣ ಪರ ಮಣಿಂದರ್ ಸಿಂಗ್ ವಕಾಲತ್ತು ವಹಿಸಿ ವಾದ ಮಂಡಿಸಿದರು. ಇನ್ನೂ ಮುಡಾ ಹಗರಣ ತನಿಖೆಯನ್ನು ಈಗ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ತೀರ್ಪು ಪ್ರಕಟವಾಗುವವರೆಗೂ ಲೋಕಾಯುಕ್ತ ಸಂಸ್ಥೆ ಸದ್ಯಕ್ಕೆ ಯಾವುದೇ ವರದಿ ಸಲ್ಲಿಕೆ ಮಾಡಬಾರದು ಎಂದು ಸೂಚಿಸಿರುವ ಹೈಕೋರ್ಟ್, ಸದ್ಯಕ್ಕೆ ಸಿಎಂ ಎದೆಯಲ್ಲಿ ಟೆನ್ಶನ್ ತಂದೊಡ್ಡಿದೆ. ಈ ಪ್ರಕರಣ ಸಿಬಿಐಗೆ ಹಸ್ತಾಂತರ ಆಗೇ ಆಗುತ್ತದೆ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲರು ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಾರೆ ಧಾರವಾಡ ಹೈಕೋರ್ಟ್ ಸೋಮವಾರ ಮುಡಾ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿ ಸದ್ಯ ಈಗ ತೀರ್ಪು ಕಾಯ್ದಿರಿಸಲಾಗಿದ್ದು, ಹೈ ಕೋರ್ಟ್ ಸಿಎಂ ಸಿದ್ದರಾಯ್ಯವರಿಗೆ ಹೈ ಟೆನ್ಶನ್ ನೀಡುತ್ತಾ ಅಥವಾ ರಿಲೀಫ್ ನೀಡುತ್ತಾ ಎಂಬವುದು ಹೈ ಆದೇಶದ ಬಳಿಕವಷ್ಟೇ ತಿಳಿಯಬೇಕಾಗಿದೆ.
ಮಂಜುನಾಥ ಇನ್ ನ್ಯೂಸ್ ಧಾರವಾಡ