Hukkeri

ಬೆಳಗಾವಿಯಲ್ಲಿ ಮತ್ತೊಂದು ಮಗು ಮಾರಾಟ!!!

Share

ಎರಡನೇ ಮದುವೆಯ ಹೆಸರಲ್ಲಿ ಬೆಳಗಾವಿಯಲ್ಲಿ ಮತ್ತೊಂದು ಮಗು ಮಾರಾಟ ಜಾಲ ಪತ್ತೆಯಾಗಿದೆ. ಒಂದೇ ಗ್ರಾಮದಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಐವರ ಪೈಕಿ ಮೂವರನ್ನು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮಗು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಹುಕ್ಕೇರಿ ತಾಲೂಕಿನ ಸುಲ್ತಾನಪೂರದಲ್ಲಿ ಕಳೆದ 15 ದಿನದ ಹಿಂದೆ ಬೆಳಕಿಗೆ ಬಂದ ಪ್ರಕರಣ ಮಾಸುವ ಮುನ್ನವೇ ಇಂದು ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಎರಡನೇ ಮದುವೆಯ ಹೆಸರಲ್ಲಿ 3 ವರೆ ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಲಾಗಿದೆ.

ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದ ಅರ್ಚನಾಳಿಗೆ ಎರಡನೆ ಮದುವೆಯಾದ ಬಳಿಕ ಆಕೆಯ ಮೊದಲ ಗಂಡನ ಮಗು ಅನಾರೋಗ್ಯಕ್ಕಿಡಾಗಿದೆ. ಈ ಹಿನ್ನೆಲೆ ಮಗುವಿಗೆ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ, ಮಹಾರಾಷ್ಟ್ರದ ಸಂಗೀತಾ ಗವಳಿ, ಸಂಗೀತಾ ತಾವಡೆ ಮತ್ತು ಮೋಹನ್ ತಾವಡೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಡಿಂಗ್ಲಜನಲ್ಲಿರುವ ಸಂಗೀತಾ ಗವಳಿ ಅವರ ಮನೆಯಲ್ಲಿ ಮಗುವನ್ನು ರತ್ನಾಗಿರಿ ಜಿಲ್ಲೆಯ ಚಿಪಳುನ ತಾಲೂಕಿನ ನಂದಕುಮಾರ ಡೋಳೆಕರಗೆ 3ವರೆ ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ಅಲ್ಲದೇ ದತ್ತು ಪಡೆದುಕೊಳ್ಳುವ ನಕಲಿ ದಾಖಲೆಗಳನ್ನು ಸೃಷ್ಠಿಸಿ ಮಗುವನ್ನು ನಂದಕುಮಾರ್ ಡೋಳೆಕರಗೆ ನೀಡಲಾಗಿದೆ. ಅಲ್ಲದೇ ಮಗು ಮಾರಾಟದಿಂದ ಬಂದ ಹಣವನ್ನು ಆರೋಪಿಗಳೆಲ್ಲರೂ ಹಂಚಿಕೊಂಡಿದ್ದಾರೆ. ನಂತರ ಮಗುವಿನ ಮಾಹಿತಿ ಸಿಗದಿದ್ದಾಗ ಮಗುವಿನ ತಾಯಿ ಅರ್ಚನಾ ದೂರು ನೀಡುತ್ತಿದ್ದಂತೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಹುಕ್ಕೇರಿ ಪೊಲೀಸರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಿರುವುದಾಗಿ ಎಸ್ಪಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

 

15 ದಿನದ ಹಿಂದೆ ಸ್ಪಂದನಾ ಸಂಸ್ಥೆಗೆ ಕುರಣಿ ಪಿಡಿಓ ಮೂಲಕ ತಾಯಿ ದೂರು ನೀಡಿದ್ದರು. ಹುಕ್ಕೇರಿ ಪೊಲೀಸ ಠಾಣೆಗೆ ಹೋಗಿ ಎಫ್ ಐ ಆರ್ ದಾಖಲಿಸಿದಾಗ ಪೊಲೀಸರು ಮಗುವನ್ನು ಪತ್ತೆ ಹಚ್ಚಿದ್ದಾರೆ. ಇದು ಮೊದಲ ಪ್ರಕರಣವಾದರೇ, ಅದೇ ಗ್ರಾಮದ ಅರ್ಚನಾ ಕೂಡ ನನ್ನ ಮಗು ನಾಪತ್ತೆಯಾಗಿರುವ ಕುರಿತು ಗಮನಕ್ಕೆ ತಂದಾಗ ದೂರು ದಾಖಲಿಸಿದಾಗ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಲಕ್ಷ್ಮೀ ಎಂಬ ಮಹಿಳೆ ಮ್ಯಾರೇಜ್ ಬ್ರೋಕರ್ ತರಹ ವರ್ತಿಸಿ , ಮಗುವನ್ನು ಮಾರಾಟ ಮಾಡುತ್ತಿದ್ದಾಳೆ. ಮೋಸಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ವಿರುದ್ಧ ಶಿವಮೊಗ್ಗ ಮತ್ತು ತುಮಕೂರಿನಲ್ಲಿಯೂ ಕೇಸಗಳಿವೆ ಎಂದು ಸ್ಪಂದನಾ ಸಂಸ್ಥೆಯ ಸುಶೀಲಾ ಅವರು ತಿಳಿಸಿದರು.

 

Tags:

error: Content is protected !!