ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ 76ನೇ ಗಣರಾಜ್ಯೋತ್ಸವ ಸಂಭ್ರಮ ಅತಿ ವಿಜೃಂಭಣೆಯಿಂದ ನಡೆಯಿತು
ಈ ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವಂತ ಇಬ್ಬರು ವಿದ್ಯಾರ್ಥಿಗಳಿಗೆ ತಿಗಡಿ ಗ್ರಾಮದ ವೀರಯೋಧ ಸ್ಮಾರಕದ ಮುಂದೆ ಗ್ರಾಮಸ್ಥರಿಂದ ಸನ್ಮಾನ ಕೂಡ ನಡೆಯಿತು
ಪವಿತ್ರ ತಡಸಲೂರ ಥ್ರೋ ಬಾಲ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದ್ದು ಹಾಗೂ ರಾಜ್ಯಮಟ್ಟದಲ್ಲಿ ಸ್ನೇಹ ಹುಡ್ಡೆದ ಹರ್ಡಲ್ಸ್ Hurdles ವಿಭಾಗದಲ್ಲಿ ಆಯ್ಕೆ ಆಗಿರುತ್ತಾರೆ
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಪನಾ ಡೊಂಕನ್ನವರ ಗಂಗಾಧರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ನಾಗೇಶ ಮದನ್ನವರ ಮತ್ತು ಗ್ರಾಮದ ಜನರು ಹಾಗೂ ಶಾಲಾ ಮಕ್ಕಳು ಕೂಡ ಭಾಗವಹಿಸಿದ್ದರು ತಿಗಡಿ ಗ್ರಾಮದ ಶಾಲಾ ಮಕ್ಕಳಿಂದ ಲೆಜಮ ಕಾರ್ಯಕ್ರಮ ನಡೆಯಿತು