ಬೈಲಹೊಂಗಲ ಪೊಲೀಸರಿಂದ ಮೈಕ್ರೋ ಫೈನಾನ್ಸಗಳ ಸಭೆ ನಡೆಸಿ ನಿಯಮಬಾಹಿರವಾಗಿ ಸಾಲ ಮರುಪಾವತಿಸಿಕೊಳ್ಳಲು ಗ್ರಾಹಕರ ಮನೆಗಳಿಗೆ ಹೋಗದಂತೆ ನಿರ್ದೇಶನವನ್ನು ನೀಡಲಾಯಿತು.
ಬೈಲಹೊಂಗಲ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಮೈಕ್ರೋ ಫೈನಾನ್ಸಗಳ ಸಭೆಯನ್ನು ಇಂದು ಕರೆಯಲಾಗಿತ್ತು. ಗ್ರಾಹಕರಿಗೆ ತೊಂದರೆ ಆಗದಂತೆ ವ್ಯವಹರಿಸಬೇಕು ಮತ್ತು ರಾತ್ರಿ ವೇಳೆಯಲ್ಲಿ ಗ್ರಾಹಕರ ಮನೆಗಳಿಗೆ ಹೋಗದಂತೆ ಮೈಕ್ರೋ ಫೈನಾನ್ಸ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಬೈಲಹೊಂಗಲ ಪೊಲೀಸ್ ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು