Belagavi

ಗಾಂಧಿ ಹತ್ಯೆ ಬಗ್ಗೆ ಮಾತನಾಡುವ ಯತ್ನಾಳ ವಿರುದ್ಧ ವಾಗ್ದಾಳಿ…

Share

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು ಮಹಾತ್ಮಾ ಗಾಂಧಿಜೀ ಅವರಿಗೆ ಒಂದು ಗುಂಡು ಗೋಡ್ಸೆ ಹೊಡೆದರೇ, ಮಿಕ್ಕೆರಡು ಗುಂಡನ್ನು ನೆಹರು ಅವರು ಹೊಡೆದರೂ ಎಂಬ ಬಿಜೆಪಿ ಶಾಸಕ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಯತ್ನಾಳ ಅವರಲ್ಲಿ ಮೊದಲು ತಮ್ಮ ಪಕ್ಷದ ಬಗ್ಗೆ ಗೌರವವಿಲ್ಲ. ತಮ್ಮ ರಾಜ್ಯಾಧ್ಯಕ್ಷರ ವಿರುದ್ಧವೇ ಕಾಮನ್ ಸೆನ್ಸ್ ಇಲ್ಲದೇ ಮಾತನಾಡುತ್ತಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಮೊದಲು ಯತ್ನಾಳ ತಮ್ಮ ಪಕ್ಷದ ಬಗ್ಗೆ ಮೊದಲು ಡಿಸಿಪ್ಲೆನ್ ಕಲಿತುಕೊಳ್ಳಲಿ. ಯತ್ನಾಳ್ ಸಾಹೇಬ್ರು ದೊಡ್ಡವರಿರಬೇಕು. ಆದರೇ ಪಕ್ಷದ ಚೌಕಟ್ಟಿನಲ್ಲಿ ಡಿಸಿಪ್ಲೆನ್ ಫಾಲೋ ಮಾಡಬೇಕೆಂಬ ಕಾಮನಸೆನ್ಸ್ ಇಲ್ಲದ ವ್ಯಕ್ತಿ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದರು.

1885 ರಲ್ಲಿ ಮುಂಬೈನ ಗೋಕುಲದಾಸ್ ತೇಜಪಾಲ್ ಕಾಲೇಜಿನಲ್ಲಿ 72 ಜನರಿಂದ ರಾಷ್ಟ್ರೀಯ ಕಾಂಗ್ರೆಸಗೆ 140 ವರ್ಷದ ಇತಿಹಾಸವನ್ನು ಹೊಂದಿದೆ. ಹಲವಾರು ನಾಯಕರು ಪ್ರತಿ 1885 ರಲ್ಲಿ ಮುಂಬೈನಲ್ಲಿ ಮೊದಲ ಸಮಾವೇಶ ನಡೆಯಿತು. 1924 ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತು. ಇದರ ಅಧ್ಯಕ್ಷತೆ ವಹಿಸಲು ಬೆಳಗಾವಿಗೆ ಮಹಾತ್ಮಾ ಗಾಂಧಿಜೀಯವರು ಬೆಳಗಾವಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಅವರು ವಿಶ್ರಾಂತಿ ಪಡೆದರು. ಈಗ ಆ ಪ್ರದೇಶ ಗಾಂಧಿಪುರವೆಂದು ಗುರುತಿಸ್ಪಡುತ್ತದೆ ಎಂದರು. 1924 ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ನಾಳೆ ಐತಿಹಾಸಿಕ ಸಮಾವೇಶ ನಡೆಯಲಿದೆ ಎಂದರು.

ಇನ್ನು ನಕಲಿ ಗಾಂಧಿಗಳ ನಕಲಿ ಸಮಾವೇಶವೆಂದ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಟೀಕೆಗೆ ತಿರುಗೇಟು ನೀಡಿದ ಅವರು ಜೋಷಿಯವರು ಬಹಳ ಅಸಲಿಯಾಗಿದ್ದಾರೆ. ತಮ್ಮ ಸಾಧನೆಗಳ ಶಿಖರಗಳನ್ನು ನಿರ್ಮಿಸಿದ್ದಾರೆ. ಬಹುಶಃ ಇನ್ನು 10-15 ವರ್ಷ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ ಎಂದು ಅವರಿಗೆ ಗೊತ್ತಾಗಿದೆ. ರಾಜ್ಯ ರಾಜಕಾರಣಕ್ಕೆ ಬಂದು ಏನೆಲ್ಲ ಆಸೆಗಳನ್ನು ಇಟ್ಟಿಕೊಂಡಿದ್ದರು. ಸಿಎಂ ರೇಸನಲ್ಲಿದ್ದರು. ಬಣದ ರಾಜಕಾರಣದಿಂದಲೇ ಕಳೆದ ಬಾರಿಗಿಂತಲೂ ಮುಂದಿನ ಬಾರಿ ಇನ್ನಷ್ಟು ಕಡಿಮೆ ಸಂಖ್ಯೆಗಳಲ್ಲಿ ಬಿಜೆಪಿ ಕಳೆದು ಹೋಗಿ ಬಿಡುತ್ತೆ ಎಂದರು.

Tags:

error: Content is protected !!