Dharwad

ಹಸುಗಳ ಮೇವಿನ ಬಣವಿಗೆ ಬೆಂಕಿ, ಹೊಗೆಯಿಂದ ಬೆಚ್ಚಿ ಬಿದ್ದ ಸ್ಥಳೀಯರು…. ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ.

Share

ಹಸುಗಳಿಗಾಗಿ ಸಂಗ್ರಹ ಮಾಡಿಟ್ಟಿದ ಮನೆಯ ಹಿಂಬದಿಯ ಬಣವಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಅರ್ಧದಷ್ಟು ಬಣವಿ ಬೆಂಕಿಗೆ ಆಹುತಿಯಾಗಿರೋ ಘಟನೆ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿಂದ ಮಧ್ಯಾಹ್ನ ನಡೆದಿದೆ.‌

ನುಗ್ಗಿಕೇರಿ ಗ್ರಾಮದ ಯಲ್ಲಪ್ಪ ಕಿಡತಾಲ ಅವರಿಗೆ ಸೇರಿದ ಮೇವಿನ ಬಣವಿ ಎಂದು ತಿಳಿದು ಬಂದಿದೆ. ಬಣವಿಗೆ ಬೆಂಕಿ ಹೊತ್ತಿಕೊಂಡ ಹಿನ್ನಲೆಯಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹೋಗೆ ನೋಡುತ್ತಿದಂತೆ ಅಕ್ಕಪಕ್ಕದವರು ಬೆಂಕಿ‌ನಂದಿಸಲು ಮುಂದಾಗಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಜನರ ಸಹಕಾರದೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕೊನೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.‌

ಬಣವಿಯ ಅಕ್ಕಪಕ್ಕದಲ್ಲಿ‌ ಮನೆಗಳಿದ್ದು, ಬಣವಿಗೆ ಹೊತ್ತಿಕೊಂಡ ಬೆಂಕಿ‌ ಎಲ್ಲಿ ಮನೆಗಳಿಗೂ ವ್ಯಾಪಿಸಿ ಬಿಡುತ್ತೋ ಎಂಬ ಭಯ ಸ್ಥಳೀಯರಲ್ಲಿ ಮನೆ ಮಾಡಿತ್ತು. ಸಕಾಲಕ್ಕೆ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ದಳ ಯಶಸ್ವಿಯಾದ ಹಿನ್ನಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಾಥಮಿಖ ತನಿಖೆಯ ಬಳಿಕ ಅಗ್ನಿ ಅವಘಡ ಕ್ಕೆ ನಿಖರ ಕಾರಣ ತಿಳಿದು ಬರಬೇಕಾಗಿದೆ.

Tags:

error: Content is protected !!