Chikkodi

ಮನೆಗಳ್ಳತನ ಆರೋಪಿಗಳ ಬಂಧನ

Share

ತಾಲೂಕಿನ ಉಮರಾಣಿ ಸೇರಿದಂತೆ ವಿವಿಧ ಕಡೆ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ.

ಚಿನ್ನಾಭರಣ ಸೇರಿದಂತೆ 7.75 ಲಕ್ಷ ರೂ.ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಸೋಲಾಪುರದ ರಾಜೇಸಾಬ ಗುಲಾಬ ನಾಯಿಕವಾಡಿ ಹಾಗೂ ಓರ್ವ ಅಪ್ರಾಪ್ತ ಬಂಧಿಸಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಚಿಕ್ಕೋಡಿ ತಾಲೂಕಿನ ಉಮರಾಣಿಯಲ್ಲಿ ಮನೆಯ ಬೀಗ ಮುರಿದು ಮನೆಯಲ್ಲಿದ್ದ 1,47, 450 ರೂ. ಮತ್ತು ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಚಿಕ್ಕೋಡಿ, ಹುಕ್ಕೇರಿ, ಘಟಪ್ರಭಾ, ಸಂಕೇಶ್ವರ, ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ 11 ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಬಂಧಿತರಿಂದ 120 ಗ್ರಾಂ ಚಿನ್ನಾಭರಣ, ತಾಮ್ರದ ಹಂಡೆಗಳು, ಕೊಡಗಳು ಮತ್ತು ಕಳ್ಳತನಕ್ಕೆ ಬಳಸುತ್ತಿದ್ದ ಕಾರು ಜಪ್ತಿ ಮಾಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Tags:

error: Content is protected !!